ಯಡಿಯೂರಪ್ಪ, ಈಶ್ವರಪ್ಪ ಒಗ್ಗಟ್ಟಾಗಿದ್ದಾರೆ : ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಮರ್ಥನೆ

April 6, 2021

ಮಡಿಕೇರಿ ಏ.6 : ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಅವರುಗಳು ಬೇರೆ ಬೇರೆ ಎಂದು ಭಾವಿಸಬೇಡಿ, ಅವರು ಒಗ್ಗಟ್ಟಿನಿಂದ ಒಟ್ಟಿಗೆ ಇದ್ದಾರೆ ಎಂದು ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಭಾಗಮಂಡಲದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆಡಳಿತ ನಡೆಸುವ ಎಲ್ಲಾ ಸರಕಾರಗಳಲ್ಲೂ ಸ್ವಾಭಾವಿಕವಾಗಿ ಸಮಸ್ಯೆಗಳು ಬರುತ್ತದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರಕಾರ ನಡೆಯುತ್ತದೆ. ಉತ್ತಮ ಮತ್ತು ಬಡವರ ಪರ ಆಡಳಿತವನ್ನು ಸರಕಾರ ನೀಡುತ್ತಿದೆ. ಸಣ್ಣಪುಟ್ಟ ಗುಡುಗು ಸಿಡಿಲುಗಳು ಇದ್ದಲ್ಲಿ ಅದು ತಣ್ಣನೆಯ ಮಳೆಯಾಗಿ ಸುರಿದು ಬಳಿಕ ಎಲ್ಲವೂ ತಂಪಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರವನ್ನು ಸಮರ್ಥಿಸಿಕೊಂಡರು.
ಸಚಿವ ಈಶ್ವರಪ್ಪ ಅವರು ಸಿ.ಎಂ ವಿರುದ್ದ ರಾಜ್ಯಪಾಲರಿಗೆ ಆರೋಪ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪೂಜಾರಿ, ಈಶ್ವರಪ್ಪ ಯಡಿಯೂರಪ್ಪ ಬೇರೆ ಬೇರೆ ಎಂದು ತಿಳಿದು ಕೊಂಡಿರಾ? ಅವರು ಒಟ್ಟಿಗೆ ಇದ್ದಾರೆ. ಏನು ಸಮಸ್ಯೆ ಇಲ್ಲ. ಎಲ್ಲರೂ ಚೆನ್ನಾಗಿದ್ದೇವೆ. ನೆಮ್ಮದಿಯಾಗಿ ಎಲ್ಲರೂ ಒಪ್ಪುವಂತಹ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲ ಎಲ್ಲ ಎಂದು ಸಚಿವ ಈಶ್ವರಪ್ಪ ಆರೋಪಕ್ಕೆ ಸ್ಪಷ್ಟನೆ ನೀಡಿದರು.

error: Content is protected !!