ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ರಾಜೀನಾಮೆ

April 6, 2021

ಮುಂಬಯಿ: ನೈತಿಕ ಹೊಣೆ ಹೊತ್ತು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬಯಿ ಮಾಜಿ ಪೊಲೀಸ್‌ ಆಯುಕ್ತ ಪರಂಬೀರ್‌ ಸಿಂಗ್‌ ಲಂಚ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ಬಾಂಬೆ ಹೈಕೋರ್ಟ್‌ ಸಿಬಿಐಗೆ ಸೂಚನೆ ನೀಡುತ್ತಿದ್ದಂತೆ ಅವರು ರಾಜೀನಾಮೆ ನಿರ್ಧಾರ ಘೋಷಿಸಿದ್ದಾರೆ.

15 ದಿನಗಳ ಒಳಗೆ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಹೈಕೋರ್ಟ್‌ ಸೂಚನೆ ನೀಡಿದೆ. ಈ ಹಿಂದೆ ರಾಜೀನಾಮೆಗೆ ನಿರಾಕರಿಸಿದ್ದ ಅನಿಲ್‌ ದೇಶ್‌ಮುಖ್‌ ತಾವೇನೂ ತಪ್ಪು ಮಾಡಿಲ್ಲ ಎಂದು ವಾದಿಸಿದ್ದರು.

ಆದರೆ, “ಈಗ ಸಿಬಿಐ ಅವರ ವಿರುದ್ಧ ತನಿಖೆ ನಡೆಸಲಿದೆ. ಹೀಗಾಗಿ ಅವರು ಹುದ್ದೆಯಲ್ಲಿ ಮುಂದುವರಿಯುವುದು ಸಮಂಜಸವಲ್ಲ,” ಎಂದು ದೇಶ್‌ಮುಖ್‌ ಅವರ ಪಕ್ಷ ಎನ್‌ಸಿಪಿ ಹೇಳಿದೆ.

error: Content is protected !!