ಭಾರತವು ಗಡಿಗಳಲ್ಲಿ ಮತ್ತೆ ಸವಾಲು ಎದುರಿಸುತ್ತಿದೆ : ಜ. ನರವಾಣೆ

April 7, 2021

ಹೊಸದಿಲ್ಲಿ : ಭಾರತವು ತನ್ನ ಗಡಿಗಳಲ್ಲಿ ಹೊಸದಾಗಿ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ತರಬೇತಿಯಲ್ಲಿರುವ ಸಶಸ್ತ್ರ ಪಡೆಗಳ ಅಧಿಕಾರಿಗಳಿಗೆ ಇಂತಹ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರಬೇಕು ಎಂದು ಸೇನಾ ಮುಖ್ಯಸ್ಥ ಜ.ಎಂ. ನರವಾಣೆ ಅವರು ಹೇಳಿದರು.
ಅವರು ತಮಿಳುನಾಡಿನ ವೆಲಿಂಗ್ಟನ್‍ನಲ್ಲಿಯ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ಡಿಎಸ್‍ಎಸ್‍ಸಿ)ನಲ್ಲಿ ಪಶ್ಚಿಮ ಮತ್ತು ಉತ್ತರದ ಗಡಿಗಳಲ್ಲಿಯ ಬೆಳವಣಿಗೆಗಳು ಮತ್ತು ಭಾರತೀಯ ಸೇನೆಯ ಭವಿಷ್ಯದ ಮಾರ್ಗಸೂಚಿಯ ಮೇಲೆ ಅವುಗಳ ಪರಿಣಾಮ ಕುರಿತು ಬೋಧಕ ಸಿಬ್ಬಂದು ಮತ್ತು ತರಬೇತಿ ಪಡೆಯುತ್ತಿರುವ ಅಧಿಕಾರಿಗಳಿಗಾಗಿ ಉಪನ್ಯಾಸವನ್ನು ನೀಡುತ್ತಿದ್ದರು.

error: Content is protected !!