ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಪೆರಾಜೆ ಗ್ರಾಮದ ದೊಡ್ಡಣ್ಣ ಬರಮೇಲು ಆಯ್ಕೆ

April 7, 2021

ಮಡಿಕೇರಿ ಏ.7 : ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ದೊಡ್ಡಣ್ಣ ಬರಮೇಲು ಆಯ್ಕೆಯಾಗಿದ್ದಾರೆ.
ರಾಜ್ಯ ಮಾಧ್ಯಮ ಸಂಚಾಲಕರಾಗಿ ಪತ್ರಕರ್ತ ಅನಿಲ್ ಎಚ್.ಟಿ. ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮಡಿಕೇರಿ ಶಿಕ್ಷಕ ಎಸ್.ಟಿ.ವೆಂಕಟೇಶ್ ನೇಮಕಗೊಂಡಿದ್ದಾರೆ.
ಆಧುನಿಕ ಲಗೋರಿಯ ಜನಕ ಎಂದೇ ಖ್ಯಾತರಾಗಿರುವ ನೂತನ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಪೆರಾಜೆ ಗ್ರಾಮದ ಜ್ಯೋತಿ ಹೈಸ್ಕೂಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಮಹಾಪೋಷಕರಾಗಿ ಹಾಗೂ ಗೌರವಾಧ್ಯಕ್ಷರಾಗಿ ಸಚಿವ ಎಸ್.ಅಂಗಾರ ಕಾರ್ಯನಿರ್ವಹಿಸಲಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ.ರವಿ, ಕೆ.ಆರ್.ಪೇಟೆ, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಟಿ.ವೆಂಕಟೇಶ್ ಕೊಡಗು, ಕೋಶಾಧಿಕಾರಿಯಾಗಿ ಮಾಧವ ಬಿ.ಕೆ. ಪಂಜ, ಸಹ ಕಾರ್ಯದರ್ಶಿಯಾಗಿ ಹರೀಶ್ ರೈ ಉಬರಡ್ಕ, ಬಸವರಾಜ್ ಶಿವಮೊಗ್ಗ, ಕಾಂತುರಾಜ್ ಮೈಸೂರು, ಉಪಾಧ್ಯಕ್ಷರುಗಳಾಗಿ ಡಾ| ಕೃಷ್ಣಯ್ಯ, ಮೈಸೂರು, ಡಾ| ಕಿಶೋರ್ ಕುಮಾರ್ ಮಂಗಳೂರು, ಎಸ್. ಸಂಶುದ್ದೀನ್ ಸುಳ್ಯ, ಅಕ್ಷಯ್ ಕೆ.ಸಿ. ಸುಳ್ಯ, ಡಾ| ದೇವಿಪ್ರಸಾದ್ ಬೋಳ್ಮ, ಡಾ| ರಾಘವನ್ ಬೆಂಗಳೂರು, ನಿರ್ದೇಶಕರುಗಳಾಗಿ ಡಾ| ಉದಯಕುಮಾರ್ ಎಚ್.ವಿ., ಮಂಜುನಾಥ್ ಎ.ಯು. ಸುಳ್ಯ, ವೀರನಾಥ್ ಸುಳ್ಯ, ರಾಧಾಕೃಷ್ಣ ಹೊಸೊಳಿಕೆ, ಬಾಲಕೃಷ್ಣ ಬರೆಮೇಲು, ಕೌಶಿಕ್ ಚಿಕ್ಕಮಗಳೂರು, ಎನ್. ಕೃಷ್ಣಮೂರ್ತಿ, ಮೈಸೂರು, ಪ್ರಸಾದ್ ಜೆ. ಮಂಡ್ಯ, ಮಂಜಪ್ಪ ಟಿ. ಶಿವಮೊಗ್ಗ, ಡಾ|ಎಸ್. ಸದಾಶಿವಯ್ಯ ಪಲ್ಲೇದ ಕೊಡಗು, ನಾಗೇಶ್ ಹೆಚ್.ಡಿ. ಕೋಟೆ, ತ್ಯಾಗಂ ದಕ್ಷಿಣ ಕನ್ನಡ, ತಿಮ್ಮಾರೆಡ್ಡಿ ಡಿ.ಎ. ರಾಮನಗರ, ದೇಚಮ್ಮ ಕೊಡಗು, ಶ್ರೀಕಂಠ ಸ್ವಾಮಿ, ಬೆಂಗಳೂರು, ರವೀಂದ್ರ ನಾಥ ಕೆ.ವಿ., ಬೆಂಗಳೂರು, ಶಿವಕುಮಾರ್ ಬೆಂಗಳೂರು, ರಾಘವೇಂದ್ರ ಮೈಸೂರು, ಗೌರವ ಸಲಹೆಗಾರರಾಗಿ ಸೀತಾರಾಮ ರೈ ಸವಣೂರು, ಡಾ| ಮೋಹನ್ ಆಳ್ವ ಮೂಡಬಿದಿರೆ, ರಮೇಶ್ ಮೈಸೂರು, ಸುರೇಶ್ ಎನ್.ಬಿ., ಕಾನೂನು ಸಲಹೆಗಾರರಾಗಿ ದಿನೆಶ್ ಮಡಪ್ಪಾಡಿ ಸುಳ್ಯ, ರಾಜ್ಯ ಮಾಧ್ಯಮ ಸಂಚಾಲಕರಾಗಿ ಅನಿಲ್ ಎಚ್.ಟಿ., ಹರೀಶ್ ಬಂಟ್ವಾಳ್ ಸುಳ್ಯ, ಪರಮೇಶ್ ಮಂಡ್ಯ, ರಾಜಶೇಖರ ಬೆಂಗಳೂರು ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಸಿದೆ.
ಮುಂದಿನ ದಿನಗಳಲ್ಲಿ ಕೊಡಗೂ ಸೇರಿದಂತೆ ರಾಜ್ಯದಾದ್ಯಂತ ಲಗೋರಿ ಕ್ರೀಡೆಯನ್ನು ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆ ಲಗೋರಿಗೆ ಪೆÇ್ರೀತ್ಸಾಹ ನೀಡಲಾಗುತ್ತದೆ ಎಂದು ದೊಡ್ಡಣ್ಣ ಬರಮೇಲು ತಿಳಿಸಿದ್ದಾರೆ.

error: Content is protected !!