ಮಡಿಕೇರಿ ಖಾಸಗಿ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ : ಶಾಸಕ ಅಪ್ಪಚ್ಚುರಂಜನ್ ಅಸಮಾಧಾನ

April 7, 2021

ಮಡಿಕೇರಿ ಏ.7 : ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ನಗರದ ಖಾಸಗಿ ಬಸ್ ನಿಲ್ದಾಣವನ್ನು ಪರಿಶೀಲಿಸಿದರು. ಕುಡಿದು ಬಿಸಾಡಿರುವ ಬಾಟಲಿಗಳು, ಕಸ ಕಡ್ಡಿಗಳನ್ನು ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಾರಕ್ಕೊಮ್ಮೆಯಾದರೂ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಾಟಲಿ ಹಾಗೂ ಕಸಕಡ್ಡಿಗಳನ್ನು ಕೂಡಲೇ ತೆಗೆಸುವಂತೆ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಿದರು.

error: Content is protected !!