ಏ. 10 ರಿಂದ ಕೊಡಗು ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯಾವಳಿ ಆರಂಭ

April 8, 2021

ಮಡಿಕೇರಿ ಏ. 8 : ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಹಾಗೂ ಜಿಲ್ಲೆಯ ಪ್ರಖ್ಯಾತ ಫುಟ್ಬಾಲ್ ಕ್ಲಬ್ ಗಳಲ್ಲಿ ಒಂದಾದ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಸಹಯೋಗದಲ್ಲಿ ಕೊಡಗು ಜಿಲ್ಲಾ ಮಟ್ಟದ 16 ತಂಡಗಳ ಫುಟ್ಬಾಲ್ ಲೀಗ್ ಪಂದ್ಯಾಟ ಏ. 10 ರಿಂದ 25 ರವರೆಗೆ ನಡೆಯಲಿದೆ.

ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಹಾಗೂ ಲೀಗ್ ಪಂದ್ಯಾವಳಿಯ ಉಸ್ತುವಾರಿ ಮಿಲನ್ಸ್ ಕ್ಲಬ್ ನ ಲಿಜೇಶ್, ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮ ಏ . 10 ರಂದು ಬೆಳಗ್ಗೆ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲನ್ಸ್ ಯುವಕ ಸಂಘದ ಅಧ್ಯಕ್ಷರಾದ ಎಸ್.ಎ ಸಿಜು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾರ್ಮಾಡು ಗ್ರಾ.ಪಂ ಅಧ್ಯಕ್ಷ ನಿರಣ್ ನಾಣಯ್ಯ, ಕಾರ್ಮಾಡು ಗ್ರಾ.ಪಂ ಉಪಾಧ್ಯಕ್ಷ ಮುಕ್ಕಾಟೀರ ಎಮ್.ಬೋಪಣ್ಣ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಎ‌‌ ದೇಚಮ್ಮ, ಕಾಫಿ ಬೆಳೆಗಾರ ಪಿ.ಜಯದೀಪ್ ಅಮ್ಮತ್ತಿ, ಚಾಯ್ಸ್ ಇಲೆಕ್ಟ್ರಿಕಲ್ ಮಾಲೀಕ ಕೆ.ಹೆಚ್ ಅನೀಫ, ಉದ್ಯಮಿ ಚುಮ್ಮಿ ರೈ ಅಮ್ಮತ್ತಿ, ವಿನೂ ಆ್ಯಂಟನಿ ಅಮ್ಮತ್ತಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರ ಸಂಘದ ಅಧ್ಯಕ್ಷ ಪಿ.ಎ. ನಾಗೇಶ್, ಖಜಾಂಜಿ ದೀಪು ಮಾಚಯ್ಯ,ಉದ್ಯಮಿ ವಿ.ಎಮ್‌. ಆಶಿಖ್ ಅಮ್ಮತ್ತಿ, ಶ್ರೀ ಅರ್ಪಮೆಯಾ ಎಂಟರ್ಪ್ರೈಸ್ ಮಾಲೀಕರಾದ ಎಮ್.ಯು ಅರುಣ್ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಫುಟ್ಬಾಲ್ ಸಂಸ್ಥೆಗೆ ಸೇರಿರುವ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ, ರಾಜ್ಯ ಫುಟ್ಬಾಲ್ ಸಂಸ್ಥೆಯಿಂದ ಅಂತರಾಷ್ಟ್ರೀಯ ‌ಗುಣಮಟ್ಟದ ಗೋಲ್ ಪೆಟ್ಟಿಗೆಯನ್ನು ಅಳವಡಿಸಲಾಗಿದ್ದು, ಇದರ ಉದ್ಘಾಟನೆಯೂ ಏ. 10 ರಂದು ನಡೆಯಲಿದೆ.
ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ, ಜಿಲ್ಲೆಯ ತೀರ್ಪುಗಾರರು ಲೀಗ್ ಪಂದ್ಯಾಟದ ತೀರ್ಪುಗಾರರ ಕಾರ್ಯನಿರ್ವಹಿಸಲಿದ್ದಾರೆ.


ಏಪ್ರಿಲ್ 10 ರಂದು ನಡೆಯಲಿರುವ ಪಂದ್ಯಾವಳಿಗಳು: ಕ್ಯಾಪ್ಟನ್ಸ್ ಇಲೆವೆನ್ ಪಾಲಿಬೆಟ್ಟ: ಬಿ.ವೈ.ಸಿ ಹಾಲುಗುಂದ, ರೋಜಾರಿಯನ್ಸ್ ಎಫ್.ಸಿ ಗೋಣಿಕೊಪ್ಪ:ವೈಶ್ಣವಿ ಎಫ್.ಸಿ ಮರಗೋಡು, ಶೈನಿಂಗ್ ಬರ್ಡ್ಸ್ ಪಾಲಿಬೆಟ್ಟ: ಚೌಡೇಶ್ವರಿ ಎಫ್.ಸಿ ಅಮ್ಮತ್ತಿ, ಯೂನಿವರ್ಸಲ್ ಎಫ್.ಸಿ ರಂಗ ಸಮುದ್ರ: ಎನ್.ವೈ.ಸಿ ಕೊಡಗರಹಳ್ಳಿ, ಆಕ್ಸ್‌ಫರ್ಡ್ ವಿರಾಜಪೇಟೆ:ಐ.ಎನ್.ಎಸ್ ಗುಡ್ಡೆಹೊಸೂರು, ಸಹರಾ ಸಿ.ವೈ.ಸಿ ಒಂಟಿಯಂಗಡಿ:ಅಮಿಟಿ ಎಫ್.ಸಿ ಗದ್ದೆಹಳ್ಳ

error: Content is protected !!