ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಾವಗಡ ಬೆಟ್ಟ

ಪಾವಗಡ ಕ್ಕೆ “ಹಾವು ಬೆಟ್ಟ” ಎಂದು ಕರೆಯುತ್ತಾರೆ. 1405ರಲ್ಲಿ ಇಲ್ಲಿನ ಕೋಟೆಯು ವಿಜಯನಗರ ರಾಜರಿಂದ ನಿರ್ಮಾಣವಾಯಿತು. ಇವರಿಗೆ ಈ ಕೋಟೆ ಕೇಂದ್ರವಾಗಿತ್ತು. ಈ ಬೆಟ್ಟವು 3000ಅಡಿ ಉದ್ದವಿದೆ. ರತ್ನಗಿರಿ, ನಿಡ್ಗಲ್ ರಾಯದುರ್ಗ ರವರು ವಶಪಡಿಸಿಕೊಂಡಿದ್ದರು. ಹಾಗೂ ಹೈದರ್ ಅಲಿ ಕ್ಕಿಂತ ಮುಂಚೆ ಮರಾಠರು ಈ ಕೋಟೆಯನ್ನು ದಾಳಿಮಾಡಿದ್ದರು. ನಂತರ ಈ ಕೋಟೆ ಮರಾಠರು ಮತ್ತು ಇಂಗ್ಲೀಷ್ ಇಬ್ಬರಿಗೂವಾಯಿತು. ತದನಂತರ ಒಪ್ಪಂದದ ಮೇರೆಗೆ ಟಿಪು ಸುಲ್ತಾನ್ ಕೋಟೆಯನ್ನು ವಶಪಡಿಸಿಕೊಂಡರು. ಈ ಪ್ರದೇಶಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಹಿಂದೆ ಈ ಪ್ರದೇಶವೆಲ್ಲಾ ಗೋಂಡಾರಣ್ಯಕ್ಕೆ ಸೇರಿತ್ತೆಂದು, ಪುರಾಣದಲ್ಲಿ ಉಲ್ಲೇಖನವಿದೆ. ಪಾವಗಡ ಈ ಹೆಸರು ಬರಲು ಇಲ್ಲಿನ ಬೆಟ್ಟವು ಹಾವಿನ ಆಕಾರದಿಲ್ಲಿ ಇರುವುದೇ ಕಾರಣವೆಂದು ತಿಳಿದು ಬರುತ್ತದೆ. ಹಿಂದೆ ಇದಕ್ಕೆ ಪಾಮುಕೊಂಡ ಎಂದು ಹೆಸರಿದ್ದು ನಂತರ ಪಾವುಕೊಂಡ, ಪಾವುಕೊಡವಾಗಿ ಈ ರೀತಿಯಲ್ಲಿ ಆಡು ಭಾಷೆಯಲ್ಲಿ ಬದಲಾವಣೆ ಹೊಂದಿ ಪಾವಗಡ ಆಗಿದೆ. ನಗರದಲ್ಲಿ ಶನಿ ಮಹಾತ್ಮ ದೇವರ ದೇವಸ್ಥಾನವಿದ್ದು ಸುತ್ತಮುತ್ತಲೂ ಬಹಳ ಪ್ರಸಿದ್ದಿ ಪಡೆದಿದೆ. ತಾಲ್ಲೂಕಿನಲ್ಲಿ ನಿಡಗಲ್ ಬೆಟ್ಟ,ನಾಗಲಮಡಿಕೆಯ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಅಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿ ಪ್ರಸಿದ್ದಿ ಪಡೆದಿವೆ. ಇಲ್ಲಿನ ಬಹು ಮುಖ್ಯದೇವರು ಅಕ್ಕಮ್ಮನ ದೇವಸ್ಥಾನ. ಈ ದೇವರಿಗೆ ನಾಗಪ್ಪ ಪೂಜೆಮಾಡುತ್ತಿದರು. ಪಾವಗಡ ತಾಲ್ಲೂಕು ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು ೧೫೦ ಕಿ.ಮೀ.ದೂರವಿದ್ದು, ನಗರದಿಂದ ನೇರ ಬಸ್ ಸಂಪರ್ಕ ಹೊಂದಿದೆ.

