ಮಡಿಕೇರಿ ನಗರಸಭಾ ಚುನಾವಣೆ : ಅಭ್ಯರ್ಥಿಗಳನ್ನು ಘೋಷಿಸಿದ ಆಮ್ ಆದ್ಮಿ ಪಾರ್ಟಿ

April 11, 2021

ಮಡಿಕೇರಿ ಏ.11 : ಮಡಿಕೇರಿ ನಗರಸಭಾ ಚುನಾವಣೆ ಕಾವೇರುತ್ತಿದ್ದು, ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಪಕ್ಷದ ಕೊಡಗು ಜಿಲ್ಲಾ ವೀಕ್ಷಕರಾದ ಎಸ್.ಬಿ.ಉದಯಕುಮಾರ್ ಹಾಗೂ ಕೋಳಿಬೈಲು ಚಿಣ್ಣಪ್ಪ ವೆಂಕಟೇಶ್ ಬಿಡುಗಡೆ ಮಾಡಿದ್ದಾರೆ.
11 ನೇ ವಾರ್ಡ್‍ನಿಂದ ಫಾತಿಮ ಸಿ.ಎ, 17 ನೇ ವಾರ್ಡ್ ಎಂ.ಕೆ.ಅಪ್ಪಯ್ಯ, 19 ನೇ ವಾರ್ಡ್ ಪೃಥ್ವಿ ಹೆಚ್.ಬಿ ಹಾಗೂ ಕಲಂದರ್ ಬಾಷ ಅವರು 10 ಮತ್ತು 12 ನೇ ವಾರ್ಡ್‍ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಎರಡನೇ ಪಟ್ಟಿಯನ್ನು ಸಧ್ಯದಲ್ಲಿಯೇ ಬಿಡುಗಡೆ ಮಾಡುವುದಾಗಿ ತಿಳಿಸಿರುವ ವೀಕ್ಷಕರುಗಳು, ಭ್ರಷ್ಟಾಚಾರ ಮುಕ್ತ ದಕ್ಷ ಆಡಳಿತಕ್ಕಾಗಿ ಆಮ್ ಆದ್ಮಿ ಪಾರ್ಟಿಯನ್ನು ಮಡಿಕೇರಿ ಮತದಾರರು ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.

error: Content is protected !!