ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುವುದರಿಂದ ಆಗುವ ದುಷ್ಪರಿಣಾಮಗಳು

April 12, 2021

ಒಮ್ಮೆ ಆಹಾರ ಬಳಕೆಗಾಗಿ ಬಿಸಿ ಮಾಡಿದ ಎಣ್ಣೆಯಲ್ಲಿ ಪೋಷಕಾಂಶಗಳು ನಾಶವಾಗಿರುತ್ತವೆ. ಮುಕ್ತವಾದ ಆಮೂಲಾಗ್ರವನ್ನು ಬಿಡುಗಡೆ ಮಾಡುತ್ತವೆ. ಪದೇ ಪದೇ ಎಣ್ಣೆಯನ್ನು ಬಿಸಿ ಮಾಡುವುದರಿಂದ ಧ್ರುವ ಸಂಯುಕ್ತಗಳು ರಚನೆಯಾಗುತ್ತವೆ. ಧ್ರುವ ಸಂಯುಕ್ತಗಳು ವಿಷಕಾರಿ ಗುಣಗಳನ್ನು ಹೊಂದಿರುತ್ತವೆ.

ಅವುಗಳನ್ನು ಬಳಸುವುದರಿಂದ ಹೃದಯದ ಸಮಸ್ಯೆ, ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಪಿತ್ತಜನಕಾಂಗದ ಕಾಯಿಲೆ, ಮಧುಮೇಹ, ಬೊಜ್ಜುಗಳಂತಹ ಸಮಸ್ಯೆ ಉದ್ಭವವಾಗುತ್ತವೆ. ಸಾಕಷ್ಟು ಅಧ್ಯಯನಗಳಲ್ಲಿ ಪದೇ ಪದೇ ಎಣ್ಣೆಯನ್ನು ಬಿಸಿ ಮಾಡಿ ಆಹಾರವನ್ನು ಸೇವಿಸಿದರೆ ಅದು ವಿಷಕಾರಿ ಆಗುವುದು. ಅಂತಹ ಎಣ್ಣೆಯಲ್ಲಿ ಟ್ರಾನ್ಸ್-ಫ್ಯಾಟ್ ಮತ್ತು ಸ್ವತಂತ್ರ ರಾಡಿಕಲ್ಸ್ ಅನ್ನು ಪ್ರಚೋದಿಸುವ ಗುಣಗಳಿರುತ್ತವೆ ಎಂದು ತಿಳಿಸಿವೆ.

ಕೆಲವು ಸಂಶೋಧನೆಯ ಪ್ರಕಾರ ಶೇ. 48 ರಷ್ಟು ಜನರು ವಾರಕ್ಕೊಮ್ಮೆ 1-6 ಬಾರಿ ಜಂಕ್ ಆಹಾರವನ್ನು ಸೇವಿಸುತ್ತಾರೆ. ಅದು ಬಹಳ ಆತಂಕಕಾರಿ. ಹೊರಗಡೆ ಉದ್ಯಮದ ದೃಷ್ಟಿಯಿಂದ ಬಳಸಿದ ಎಣ್ಣೆಯನ್ನೇ ಪುನಃ ಬಳಸುವರು. ಅದು ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದು ತಿಳಿಸಿವೆ.

ಅಡುಗೆ ಎಣ್ಣೆಯಲ್ಲಿ ಶೇ. 25 ರಷ್ಟು ಟಿಪಿಸಿಯನ್ನು ಹೊಂದಿರಬೇಕು. ಅದಕ್ಕೂ ಹೆಚ್ಚಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಮ್ಮೆ ಬಿಸಿ ಮಾಡಿದ ಎಣ್ಣೆಯನ್ನು ಪುನಃ ಬಿಸಿ ಮಾಡಿ ಇತರ ಆಹಾರಗಳ ತಯಾರಿಕೆಗೆ ಬಳಸಿದರೆ ಅದರಲ್ಲಿ ಟಿಪಿಸಿ ಶೇ. 25 ಕಿಂತ ಹೆಚ್ಚಿನ ಪ್ರಮಾಣ ಇರುತ್ತದೆ.

ಎಣ್ಣೆಯನ್ನು ಮರು ಬಳಕೆ ಮಾಡಬೇಕು ಎಂದುಕೊಂಡಿದ್ದರೆ ಮೊದಲ ಬಾರಿಗೆ ಎಣ್ಣೆಯನ್ನು ಬಳಸುವಾಗ ಅತಿಯಾದ ಬಿಸಿಗೆ ಒಳಪಡಿಸಬಾರದು. ಆಳವಾಗಿ ಹುರಿಯುವಾಗ ಮೊದಲೇ ಉಪ್ಪನ್ನು ಸೇರಿಸಬಾರದು. ಒಮ್ಮೆ ಬಿಸಿ ಮಾಡಿ ಬಳಸಿದ ಎಣ್ಣೆಯಿಂದ ಪುನಃ ಆಹಾರ ತಯಾರಿಕೆಗೆ ಅಥವಾ ಕರಿಯುವ ಉದ್ದೇಶಕ್ಕೆ ಬಳಸಬಾರದು.

ಒಮ್ಮೆ ಹುರಿಯಲು ಅಥವಾ ಕರಿಯಲು ಬಳಸಿದ ಎಣ್ಣೆಯಲ್ಲಿ ಆಹಾರ ಕಣಗಳು ಉಳಿದಿರುತ್ತವೆ. ಅವು ಎಣ್ಣೆಯನ್ನು ಕಲುಷಿತಗೊಳಿಸುತ್ತವೆ. ಸ್ವಲ್ಪ ಪ್ರಮಾಣದಲ್ಲಿಯೇ ಎಣ್ಣೆಯ ಬಳಕೆ ಮಾಡಿ. ಒಮ್ಮೆಲೇ ಹೆಚ್ಚು ಪ್ರಮಾಣದಲ್ಲಿ ಎಣ್ಣೆಯನ್ನು ಬಳಸಿ, ಪುನಃ ಅದರ ಬಳಕೆಗೆ ಇಡಬೇಡಿ.

ಗರ್ಭಾವಸ್ಥೆಯಲ್ಲಿ ಇರುವಾಗ ಪೌಷ್ಟಿಕ ಆಹಾರಗಳ ಮೂಲಕ ಕ್ಯಾಲೋರಿಯನ್ನು ಹೆಚ್ಚಿಸಿಕೊಳ್ಳಬೇಕು. ಸೂಕ್ತ ಆಹಾರಗಳ ಸೇವನೆ ಆದಾಗ ಮಗುವಿನ ಬೆಳವಣಿಗೆಯು ಆರೋಗ್ಯಕರವಾಗಿ ಇರುತ್ತದೆ. ಆಗ ತಾಯಿಯ ದೇಹದಲ್ಲಿ ಗಣನೀಯವಾಗಿ ಏರಿಕೆ ಆಗುವುದು. ಗರ್ಭಾವಸ್ಥೆಯಲ್ಲಿ ಇರುವಾಗ ಮರು ಬಳಕೆ ಮಾಡಿದ ಎಣ್ಣೆಯನ್ನು ಮರು ಉಪಯೋಗಿಸಲು ಬಳಸಬಾರದು.

ಅಂತಹ ಎಣ್ಣೆಯಲ್ಲಿ ಯಾವುದೇ ಆಹಾರವನ್ನು ತಯಾರಿಸಬಾರದು. ಅಂತಹ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ನವಜಾತ ಮಗುವಿನ ಆರೋಗ್ಯ ಹದಗೆಡುವುದು. ಜನ್ಮ ದೋಷಗಳು ಕಾಣಿಸಿಕೊಳ್ಳುತ್ತವೆ. ತಾಯಿಯ ದೇಹದಲ್ಲೂ ಅನಗತ್ಯ ಕೊಬ್ಬು ಹಾಗೂ ದೀರ್ಘ ಕಾಲದ ಆರೋಗ್ಯ ಸಮಸ್ಯೆ ಉಂಟಾಗುವುದು.

ಬಳಸಿದ ಎಣ್ಣೆ ಅಥವಾ ಹೊಗೆಯಾಡಿದ ಎಣ್ಣೆಯಲ್ಲಿ ಬೇಯಿಸಿದ ಆಹಾರವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ದೇಹದಲ್ಲಿ ಹೆಚ್ಚಾದಂತೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಕಾಡುವುದು. ಪಾಶ್ರ್ವವಾಯು ಮತ್ತು ಎದೆ ನೋವಿನ ಅಪಾಯವನ್ನು ಹೆಚ್ಚಿಸುವುದು. ಇದು ವಯಸ್ಕರಿಗೆ ಹಾಗೂ ಹೃದಯ ರೋಗಿಗಳಿಗೆ ಅತ್ಯಂತ ಅಪಾಯಕಾರಿಯಾದ ಸಂಗತಿಯಾಗಿದೆ.

ಆಗಾಗ ಗಂಟಲಲ್ಲಿ, ಎದೆಯಲ್ಲಿ ಹಾಗೂ ಹೊಟ್ಟೆಯಲ್ಲಿ ಸುಡುವಂತಹ ಸಂವೇದನೆ ಉಂಟಾಗುತ್ತದೆ ಎಂದರೆ ಅದು ಆಮ್ಲೀಯತೆ ಅಥವಾ ಅಸಿಡಿಟಿಯ ಸಂಕೇತವಾಗಿರುತ್ತದೆ. ಈ ರೀತಿಯ ಸಮಸ್ಯೆ ಹೆಚ್ಚುತ್ತಿದೆ ಎಂದಾದರೆ ನೀವು ಅಡುಗೆ ಎಣ್ಣೆಯಿಂದ ಎಂದು ಪರಿಗಣಿಸಬಹುದು.

ರಸ್ತೆ ಬದಿಯ ಜಂಕ್ ಆಹಾರಗಳು, ಪ್ರೈಡ್ರೈಸ್, ಕುರುಕಲು ತಿಂಡಿ ಹೀಗೆ ವಿವಿಧ ಜಂಕ್ ಆಹಾರವನ್ನು ತಿನ್ನುತ್ತಿದ್ದೀರಿ ಎಂದಾದರೆ ಆಮ್ಲೀಯ ಸಮಸ್ಯೆ ಬರುವುದು. ಅಂತಹ ಎಣ್ಣೆಯಲ್ಲಿ ಬೇಯಿಸಿದ ಆಹಾರವನ್ನು ಸವಿಯುವುದನ್ನು ನಿಲ್ಲಿಸಬೇಕು.

ಒಮ್ಮೆ ಬೇಯಿಸಿದ ಎಣ್ಣೆಯನ್ನು ಪುನಃ ಆಹಾರ ತಯಾರಿಸಲು ಬಳಸಬಾರದು. ಒಮ್ಮೆ ಬಿಸಿಯಾಗಿ ತಣ್ಣಗಾದ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ಸವಿಯಬಾರದು. ಅಂತಹ ಎಣ್ಣೆ ಹಾಗೂ ಆಹಾರವನ್ನು ಸವಿಯುವುದರಿಂದ ಎಲ್ಲಾ ವಯೋಮಾನದವರ ಆರೋಗ್ಯ ಹದಗೆಡುವುದು.

ನಿಮ್ಮ ಉತ್ತಮ ಆರೋಗ್ಯವನ್ನು ನೀವು ಬಯಸುತ್ತೀರಿ ಎಂದಾದರೆ ಎಣ್ಣೆಯ ಪುನರ್ ಬಳಕೆಯಿಂದ ದೂರ ಉಳಿಯಿರಿ. ಇಲ್ಲವಾದರೆ ದೀರ್ಘ ಸಮಯದ ಆರೋಗ್ಯ ಸಮಸ್ಯೆ ಕಾಡುವುದು. ಆರೋಗ್ಯಕರವಾದ ತಾಜಾ ಆಹಾರವನ್ನು ಸವಿಯಲು ಮೊದಲ ಆದ್ಯತೆ ನೀಡಿ.

error: Content is protected !!