18 ಅಡಿ ಎತ್ತರ ಏಕಶಿಲಾ ಗಣಪತಿ ದೇವಾಲಯ

April 12, 2021

ಬಸವನಗುಡಿಯ ಬುಲ್ ಟೆಂಪಲ್ ಪಕ್ಕದಲ್ಲೆ ಇರುವ ದೊಡ್ಡ ಗಣಪತಿ ದೇವಸ್ಥಾನವು ಬಹುವಾಗಿ ಭೇಟಿ ನೀಡಲ್ಪಡುವ ಒಂದು ಜನಪ್ರಿಯ ದೇವಸ್ಥಾನ. ಬಸವನಗುಡಿ ಮುಖ್ಯ ರಸ್ತೆಯ ಮೇಲೆ ನೆಲೆಸಿರುವ ಈ ದೇವಸ್ಥಾನವನ್ನು ನಗರದ ಯಾವುದೇ ಭಾಗದಿಂದ ಸುಲಭವಾಗಿ ರಿಕ್ಷಾ ಅಥವಾ ಬಸ್ ಮೂಲಕ ತಲುಪಬಹುದು. ಈ ದೇವಸ್ಥಾನವು ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿದೆ. ಒಮ್ಮೆ ಕೆಂಪೇಗೌಡರು ವಿಹರಿಸುತ್ತಿದ್ದಾಗ ಹಲವು ಬಂಡೆಗಳಲ್ಲಿ ಒಂದು ಬಂಡೆಯು ಗಣಪತಿಯ ಆಕರವನ್ನು ಹೋಲುತ್ತಿದ್ದ ಹಾಗೆ ಕಂಡುಬಂದಿತು. ತಕ್ಷಣವೆ ಅವರು ತಮ್ಮ ಶಿಲ್ಪಿಗಳನ್ನು ಕರೆತಂದು ಅದನ್ನು ಒಂದು ಏಕಶಿಲಾ ಗಣಪತಿಯ ವಿಗ್ರಹದ ಹಾಗೆ ರೂಪಿಸಲು ಸೂಚಿಸಿದರು. ಈ ದೇವಸ್ಥಾನದ ವಿಶೇಷತೆ ಬೃಹತ್ತಾದ ಏಕಶಿಲಾ ಗಣೇಶ ವಿಗ್ರಹ. 18 ಅಡಿ ಎತ್ತರವಾಗಿದ್ದು, 16 ಅಡಿಗಳಷ್ಟು ಅಗಲವಾಗಿದೆ. ಇದನ್ನು ಶಕ್ತಿ ಅಥವಾ ಸತ್ಯ ಗಣಪತಿ ಎಂದು ಕರೆಯಲಾಗುತ್ತದೆ. ಈ ವಿಗ್ರಹವು ತನ್ನ ಬಲಭಾಗದಲ್ಲಿ ಇನ್ನೂ ಬೆಳೆಯುತ್ತಿದೆ ಎಂದು ನಂಬಲಾಗಿದೆ.

ದೇವಸ್ಥಾನ ತೆರೆದಿರುವ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ12.30 ರ ವರೆಗೆ. ಸಾಯಂಕಾಲ 5.30 ರಿಂದ 8.30 ರ ವರೆಗೆ.

error: Content is protected !!