ಲಸಿಕೆ ಪಡೆದ ಸಿಂಹ : ಕೋವಿಡ್ ಲಸಿಕೆ ಉತ್ಸವದಲ್ಲಿ ಮೈಸೂರು ಮೇಲುಗೈ

April 12, 2021

ಮಡಿಕೇರಿ ಏ.12 : ಮೈಸೂರಿನ ಮೇಟಗಳ್ಳಿ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಕೊಡಗು- ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಕೋವಿಡ್- 19 ಲಸಿಕೆ ಪಡೆದರು.
45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯವಿದ್ದು, ದಯವಿಟ್ಟು ಅರ್ಹ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಲಸಿಕೆ ಪಡೆಯಬೇಕೆಂದು ಸಂಸದರು ಇದೇ ಸಂದರ್ಭ ಮನವಿ ಮಾಡಿದರು.
ಮೈಸೂರು ಜಿಲ್ಲೆಯಲ್ಲಿ 4 ಲಕ್ಷ ಲಸಿಕೆಯನ್ನು ಹಾಕಿಸಬೇಕೆಂದು ಕೊಟ್ಟಿದ್ದ ಟಾರ್ಗೆಟ್ ನಲ್ಲಿ ಹೆಚ್ಚು ಕಡಿಮೆ 4 ಲಕ್ಷದ ಸಮೀಪಕ್ಕೆ ಬಂದಿದ್ದೀವಿ. ಪ್ರತಿನಿತ್ಯ 25 ಸಾವಿರ ಲಸಿಕೆ ಯನ್ನು ಹಾಕಿಸಬೇಕೆಂದು ಟಾರ್ಗೆಟ್ ಇದೆ. ಪ್ರತಿ ನಿತ್ಯ ನಾವು 35 ಸಾವಿರಕ್ಕೂ ಹೆಚ್ಚು ಲಸಿಕೆಗಳನ್ನು ನೀಡುತ್ತಿದ್ದೇವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಹಾಗೂ ಲಸಿಕೆ ಉತ್ಸವದಲ್ಲಿ ಮೈಸೂರು ಮುಂಚೂಣಿಯಲ್ಲಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಇದಕ್ಕೆ ಕಾರಣಕರ್ತರಾದ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ರವರಿಗೆ, ಡಿ.ಹೆಚ್.ಓ ಹಾಗೂ ಎಲ್ಲಾ ಕೊರೋನಾ ವಾರಿಯರ್ಸ್ ರವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

error: Content is protected !!