ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ : ಏ.30 ಕೊನೆ ದಿನ

April 13, 2021

ಮಡಿಕೇರಿ ಏ.13 : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲ್ಲೂಕು ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 8 ನೇ ತರಗತಿಯಿಂದ ಮೇಲ್ಪಟ್ಟ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದೆಂದು ಸಮಿತಿಯ ತಾಲ್ಲೂಕು ಅಧ್ಯಕ್ಷ ಎ.ಪಿ.ದೀಪಕ್ ತಿಳಿಸಿದ್ದಾರೆ.
“ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನ” ವಿಷಯದ ಕುರಿತು ಒಂದು ಸಾವಿರ ಪದಗಳು ಮೀರದಂತೆ ಟೈಪ್ ಮಾಡಿದ ಪ್ರಬಂಧವನ್ನು 96117 66713 ಸಂಖ್ಯೆಗೆ ವಾಟ್ಸಪ್ ಮತ್ತು deepakdeepuap@gmail.com ಗೆ ಇ-ಮೇಲ್ ಮಾಡಬಹುದಾಗಿದೆ. ಪ್ರಬಂಧ ಕಳುಹಿಸಲು ಏ.30 ಕೊನೆಯ ದಿನವಾಗಿದ್ದು, ಮೇ ಎರಡನೇ ವಾರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಸ್ಪರ್ಧಿಗಳು ತಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಖಡ್ಡಾಯವಾಗಿ ನಮೂದಿಸಿರಬೇಕು.
ಪ್ರಥಮ ಬಹುಮಾನ ರೂ.5 ಸಾವಿರ, ದ್ವಿತೀಯ 3 ಸಾವಿರ ಹಾಗೂ ತೃತೀಯ ಬಹುಮಾನ 1 ಸಾವಿರ ರೂ. ಆಗಿರುತ್ತದೆ. ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗುವ ಪ್ರಬಂಧಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ದೀಪಕ್ ತಿಳಿಸಿದ್ದಾರೆ.

error: Content is protected !!