ಗೋಣಿಕೊಪ್ಪದಲ್ಲಿ ಕ್ಯಾಂಪ್ಕೋ ಸಹಕಾರ ಸಂಘದ ಕರಿಮೆಣಸು ಖರೀದಿ ಕೇಂದ್ರ ಉದ್ಘಾಟನೆ

April 13, 2021

ಮಡಿಕೇರಿ ಏ.13 : ಕರಿಮೆಣಸು ಬೆಳೆಗೆ ಸಂಬಂಧಿಸಿದಂತೆ ಕ್ಯಾಂಪ್ಕೊ ಸಂಸ್ಥೆ ಮಾರುಕಟ್ಟೆ ಸುಸ್ಥಿರತೆ ಮತ್ತು ಬೆಳೆಗಾರರಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಮುಂದಾಗಿದೆ. ಇದೇ ಕಾರಣದಿಂದ ಗೋಣಿಕೊಪ್ಪದಲ್ಲಿ ಕ್ಯಾಂಪ್ಕೋ ಸಹಕಾರ ಸಂಘದ ಕರಿಮೆಣಸು ಖರೀದಿ ಕೇಂದ್ರ ಆರಂಭಗೊಂಡಿದ್ದು, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಪುತ್ತೂರಿನ ಶ್ರೀರಾಮ ಶಾಲೆಯ ಸ್ಥಾಪಕ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತ್ತರ ಪ್ರಮುಖರು ಕೇಂದ್ರವನ್ನು ಉದ್ಘಾಟಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕ್ಯಾಂಪ್ಕೊ ಸಂಸ್ಥೆ ಕೊಡಗಿನ ಬೆಳೆಗಾರರಿಗೆ ಸಹಕಾರಿಯಾಗಿ ಕಾರ್ಯನಿರ್ಹಿಸಲಿ ಎಂದು ಶುಭ ಹಾರೈಸಿದರು.

ಕ್ಯಾಂಪ್ಕೊ ಸಹಕಾರ ಸಂಘದ ಅಧ್ಯಕ್ಷ  ಕಿಶೋರ್ ಕೂಡಗಿ ಮಾತನಾಡಿ ಕರಿಮೆಣಸಿನ ಗುಣಮಟ್ಟ ಕಾಯ್ದುಕೊಂಡು ಭವಿಷ್ಯದಲ್ಲಿ ಕ್ಯಾಂಪ್ಕೋ ಬ್ರಾಂಡ್ ನಡಿಯಲ್ಲಿ ವಿದೇಶಕ್ಕೂ ರಫ್ತು ಮಾಡುವ ಚಿಂತನೆ ಹೊಂದಲಾಗಿದೆ ಎಂದು ಹೇಳಿದರು.

ಕರಿಮೆಣಸು ಖರೀದಿ ಕೇಂದ್ರವನ್ನು ಕರಿಮೆಣಸು ಬೆಳೆಗಾರರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

error: Content is protected !!