ಅಬ್ಬೂರುಕಟ್ಟೆಯಲ್ಲಿ ರೋಮನ್ ಕ್ಯಾಥೋಲಿಕ್ ಕ್ರೀಡಾಕೂಟ ಸಮಾರೋಪ : ಪತ್ರಕರ್ತ ವಿನ್ಸೆಂಟ್ ಗೆ ಸನ್ಮಾನ

April 13, 2021

ಮಡಿಕೇರಿ ಏ.13 : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ 10ನೇ ವಾರ್ಷಿಕೋತ್ಸವದ ಅಂಗವಾಗಿ ಅಬ್ಬೂರುಕಟ್ಟೆಯ ಸಂತ ಲಾರೆನ್ಸ್‍ರ ದೇವಾಲಯದ ಆವರಣದಲ್ಲಿ ನಡೆದ ಕ್ರೀಡೋತ್ಸವ ಸಮಾರೋಪಗೊಂಡಿದೆ.

ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪದ ಪತ್ರಕರ್ತ ವಿನ್ಸೆಂಟ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಳೆದ 20 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನಿಸ್ವಾರ್ಥದಿಂದ ದುಡಿದ ವಿನ್ಸೆಂಟ್ ಅವರ ಸೇವೆಯನ್ನು ಆಯೋಜಕರು ಶ್ಲಾಘಿಸಿದರು. ತೆಪ್ಪದ ಕಂಡಿ ಸೇತುವೆ ನಿರ್ಮಾಣಕ್ಕೆ ಇವರ ವರದಿಯೂ ಕಾರಣವೆಂದು ಸ್ಮರಿಸಿಕೊಂಡರು.

ವಿವಿಧ ಕ್ಷೇತ್ರಗಳ ಸಾಧಕರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತ್ತಲ್ಲದೆ ವೈವಿಧ್ಯಮಯ ಕ್ರೀಡೆಗಳಲ್ಲಿ ಪಾಲ್ಗೊಂಡು ವಿಜೇತರಾದವರಿಗೂ ಬಹುಮಾನ ವಿತರಿಸಲಾಯಿತು.

error: Content is protected !!