ಸರ್ವ ರೋಗಗಳಿಗೂ ದಿವ್ಯೌಷಧಿ ತಾಳೆ ಹಣ್ಣು

April 14, 2021

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಒಂದು ಟನ್’ಗಳಷ್ಟು ಬೇಸಿಗೆ ಹಣ್ಣುಗಳಿದ್ದರೂ, ತಾಳೆ ಹಣ್ಣು ಅತ್ಯುತ್ತಮವಾದುದು, ಏಕೆಂದರೆ ಇದು ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಮತ್ತು ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತದೆ.

ಬೇಸಿಗೆ ಕಾಲದಲ್ಲಿ ಪ್ರತಿಯೊಬ್ಬರಿಗೂ ತಮ್ಮ ದೇಹದ ತಾಪಮಾನ ಅಧಿಕವಾಗಿ ಕಂಡುಬರುತ್ತದೆ. ಆದರೆ ಕೆಲವರು ಇದನ್ನು ತಪ್ಪಾಗಿ ಜ್ವರ ಎಂದು ಭಾವಿಸುತ್ತಾರೆ. ಏಕೆಂದರೆ ಅಷ್ಟರಮಟ್ಟಿಗೆ ಬೇಸಿಗೆಯ ಬಿಸಿಲಿನಿಂದ ಬಳಲಿ ಸುಸ್ತಾಗಿರುತ್ತಾರೆ.
ತಾಟಿ ಹಣ್ಣಿನಲ್ಲಿ ದೇಹದ ತಾಪಮಾನವನ್ನು ತಂಪು ಮಾಡುವ ಗುಣ ಲಕ್ಷಣಗಳು ಹೆಚ್ಚಾಗಿವೆ. ಹಾಗಾಗಿ ಇವುಗಳಿಂದ ಜ್ಯೂಸ್ ತಯಾರು ಮಾಡಿ ಸವಿಯಬಹುದು.
ತಾಟಿ ಹಣ್ಣಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಕೆಲವು ಬಗೆಯ ಪೌಷ್ಟಿಕ ಸತ್ವಗಳು ಎನ್ನಲಾದ ಸೋಡಿಯಂ ಮತ್ತು ಪೊಟಾಶಿಯಂ ಅಂಶಗಳು ಹೆಚ್ಚಾಗಿ ಕಂಡುಬರುತ್ತವೆ.
ಬೇಸಿಗೆ ಕಾಲದಲ್ಲಿ ಕೆಲವರಿಗೆ ರಕ್ತದ ಒತ್ತಡದಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಸುಸ್ತು, ಆಯಾಸ ಜೊತೆಗೆ ಹೃದಯದ ತೊಂದರೆಗಳು ಸಹ ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತಾಟಿ ಹಣ್ಣಿನ ಸೇವನೆ ಮಾಡಬಹುದು.
ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗದಂತೆ ನೋಡಿಕೊಂಡು ದೇಹದಲ್ಲಿರುವ ಎಲ್ಲಾ ಬಗೆಯ ಎಲೆಕ್ಟ್ರೋಲೈಟ್ ಅಂಶಗಳ ಸಮತೋಲನವನ್ನು ಕಾಯ್ದುಕೊಂಡು ಅತ್ಯುತ್ತಮ ಆರೋಗ್ಯ ನಿರ್ವಹಣೆಯನ್ನು ಮಾಡಿಕೊಳ್ಳಬಹುದು.

ಬೇಸಿಗೆ ಕಾಲದಲ್ಲಿ ಈ ದೇಹದಿಂದ ನೀರಿನ ಅಂಶ ಸಾಕಷ್ಟು ಪ್ರಮಾಣದಲ್ಲಿ ಬೆವರಿನ ರೂಪದಲ್ಲಿ ಹರಿದು ಹೊರಬರುತ್ತದೆ. ಇದರ ಜೊತೆಗೆ ನಾವು ಸೇವನೆ ಮಾಡುವ ಆಹಾರ ಜೀರ್ಣ ಮಾಡುವ ಪ್ರಕ್ರಿಯೆಯಲ್ಲಿ ಸಾಕಷ್ಟು ನೀರಿನ ಅಂಶ ಬಳಕೆಯಾಗುತ್ತದೆ.
ಮೂತ್ರ ವಿಸರ್ಜನೆಯಲ್ಲಿ ಅಪಾರ ಪ್ರಮಾಣದ ನೀರಿನ ಅಂಶ ನಮ್ಮ ದೇಹದಿಂದ ನಷ್ಟವಾಗುತ್ತದೆ. ಆದರೆ ಈ ಎಲ್ಲಾ ವಿಚಾರಗಳಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಬೇರೆ ಹಣ್ಣಿನ ಜ್ಯೂಸ್ ಗಳನ್ನು ಸೇವನೆ ಮಾಡುವ ಜೊತೆಗೆ ತಾಟಿ ಹಣ್ಣಿನ ರಸ ಸೇವನೆ ಕೂಡ ತುಂಬಾ ಅತ್ಯಗತ್ಯ ಎಂದು ಹೇಳಬಹುದು.

ತಾಟಿ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ಕ್ಯಾಲೊರಿ ಅಂಶಗಳು ಇರುವ ಕಾರಣ ದೇಹದ ಶಕ್ತಿ ಮತ್ತು ಸದೃಢತೆಗೆ ಯಾವುದೇ ಕೊರತೆ ಉಂಟಾಗುವುದಿಲ್ಲ.
ಬೇಸಿಗೆ ಕಾಲದಲ್ಲಿ ವಿಪರೀತ ಆಯಾಸ ಸುಸ್ತು ಎದುರಿಸುವವರು ಈ ಹಣ್ಣಿನ ತೊಳೆಗಳನ್ನು ಆಗಾಗ ನಿಯಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು. ಇದರಿಂದ ದೀರ್ಘ ಕಾಲದವರೆಗೆ ದೇಹದಲ್ಲಿ ಚೈತನ್ಯ ಹಾಗೆ ಉಳಿಯುತ್ತದೆ. ಬೇಸಿಗೆಯಲ್ಲಿ ಕಂಡುಬರುವ ಆರೋಗ್ಯದ ಸಾಕಷ್ಟು ಸಮಸ್ಯೆಗಳು ಇದರಿಂದ ದೂರವಾಗುತ್ತವೆ.

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಗಮನಿಸಬೇಕಾದ ಒಂದು ಅಂಶ
ತಾಟಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಮತ್ತು ಕ್ಯಾಲೊರಿ ಅಂಶಗಳು ಇರುವ ಕಾರಣ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಸ್ವಲ್ಪ ಆಲೋಚನೆ ಮಾಡಬೇಕು.
ಏಕೆಂದರೆ ಇದರಿಂದ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದಷ್ಟು ನಿಮ್ಮ ಆಹಾರ ಪದ್ಧತಿಯಲ್ಲಿ ಸಕ್ಕರೆಯನ್ನು ನಿಯಮಿತವಾಗಿ ಬಳಕೆ ಮಾಡಿ.

ಹೊಟ್ಟೆಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳಿದ್ದರೂ ತಾಳೆ ಹಣ್ಣು ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.

error: Content is protected !!