ಹಾಲಿನ ಕೆನೆಯಿಂದ ಚರ್ಮದ ಆರೈಕೆ

April 15, 2021

ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್‍ಗಳು ಚರ್ಮದ ಆರೈಕೆಗೆ ಸಹಾಯ ಮಾಡುತ್ತವೆ. ಹಾಲಿನಲ್ಲಿ ಸಿಗುವ ನೈಸರ್ಗಿಕ ಕೆನೆಯು ಕೊಬ್ಬು ಮತ್ತು ಪ್ರೋಟೀನ್‍ಗಳಿಂದ ಸಮೃದ್ಧವಾಗಿರುತ್ತದೆ. ವಿಶೇಷವಾಗಿ ಚರ್ಮದ ಶುಷ್ಕತೆ, ಸುಕ್ಕು, ಅಕಾಲಿಕ ವಯಸ್ಸಾದ ಚಿಹ್ನೆ ಹಾಗೂ ಮಂಕಾದ ಸ್ಥಿತಿಯನ್ನು ನಿವಾರಿಸುವುದು.

ಕೆನೆಯಿಂದ ಚರ್ಮದ ಆರೈಕೆ ಮಾಡುವುದರಿಂದ ಚರ್ಮವು ಪುನಃಶ್ಚೇತನ ಪಡೆದುಕೊಳ್ಳುವುದು. ಚರ್ಮದ ಆಳದಿಂದ ಪೋಷಣೆ ನೀಡುವ ಮೂಲಕ ವಯಸ್ಸಾದ ಚಿಹ್ನೆ, ಸುಕ್ಕು, ಗೆರೆ ಸೇರಿದಂತೆ ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ.

ಕೆನೆಯಲ್ಲಿ ಲ್ಯಾಕ್ಟಿಕ್ ಆಮ್ಲ ಇರುತ್ತದೆ. ಇದು ಚರ್ಮವನ್ನು ಎಲ್ಫೋಲಿಯೇಟ್ ಮಾಡುತ್ತದೆ. ಸತ್ತ ಕೋಶಗಳು, ಕೊಳೆ, ಜಿಡ್ಡು ಮತ್ತು ವಿಷಕಾರಿ ಅಂಶವನ್ನು ತೆಗೆಯುವುದು. ಮಲೈ ಜೊತೆಗೆ ಸಕ್ಕರೆನ್ನು ಬಳಸಿ ಸ್ಕ್ರಬ್ ನಂತೆ ಬಳಸಿದರೆ ಚರ್ಮವು ಮೃದು ಹಾಗೂ ಆಕರ್ಷಕವಾಗಿ ಕಂಗೊಳಿಸುವುದು.

ಕೆನೆಯನ್ನು ಚರ್ಮದ ಆರೈಕೆಗೆ ಬಳಸುವುದರಿಂದ ಚರ್ಮವು ಪುನರ್ ಯೌವ್ವನ ಪಡೆದುಕೊಳ್ಳುವುದು. ಮಲೈನಲ್ಲಿರುವ ಚಿಕಿತ್ಸಾ ಗುಣವು ಚರ್ಮವನ್ನು ದೀರ್ಘ ಸಮಯಗಳ ಕಾಲ ತೇವಾಂಶದಿಂದ ಕೂಡಿರುವಂತೆ ಮಾಡುವುದು. ಜೊತೆಗೆ ನೈಸರ್ಗಿಕವಾದ ಹೊಳಪನ್ನು ನೀಡುವುದು.

ಬಳಕೆ:

  • ಒಂದು ಟೀ ಚಮಚ ಮಲೈ ತೆಗೆದುಕೊಳ್ಳಿ.
  • ಅದನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿಕೊಳ್ಳಿ.
  • 15-20 ನಿಮಿಷಗಳ ಕಾಲ ಬೆರಳುಗಳಿಂದ ಮೃದುವಾಗಿ ಮಸಾಜ್ ಮಾಡಿ.
  • ಬಳಿಕ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.
  • ಹತ್ತುನಿಮಿಷಗಳ ಕಾಲ ಸೋಪ್ ಬಳಸದೆ ಹಾಗೆಯೇ ಆರಲು ಬಿಡಿ.
  • ನಂತರ ಸೋಪ್ ಬಳಸಿ ಸ್ವಚ್ಛಗೊಳಿಸಿ.
  • ಒಂದು ಬೌಲ್‍ನಲ್ಲಿ ಸ್ವಲ್ಪ ಕೆನೆ ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಗೊಳಿಸಿ.
  • ಮಿಶ್ರಣವನ್ನು ಮುಖಕ್ಕೆ ಹಚ್ಚಿ, ವೃತ್ತಾಕಾರದಲ್ಲಿ ಮುಖವನ್ನು ಮಸಾಜ್ ಮಾಡಿ.
  • ಬಳಿಕ 5-10 ನಿಮಿಷಗಳ ಕಾಲ ಆರಲು ಬಿಡಿ.
  • ನಂತರ ಮೃದು ನೀರಿನಲ್ಲಿ ಮುಖವನ್ನು ಸ್ವಚ್ಛಗೊಳಿಸಿ.
  • ಒಂದು ಬೌಲ್ ಅಲ್ಲಿ 1 ಟೀ ಚಮಚ ಕೆನೆ ಮತ್ತು 1 ಟೀ ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ, ಮಿಶ್ರಗೊಳಿಸಿ.
  • ಅಗತ್ಯಕ್ಕೆ ಅನುಗುಣವಾಗಿ ಪ್ರಮಾಣವನ್ನು ಹೆಚ್ಚಿಸಬಹುದು.
  • ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ, ಸ್ವಲ್ಪ ಸಮಯಗಳ ಕಾಲ ಆರಲು ಬಿಡಿ.
  • ಸಂಪೂರ್ಣವಾಗಿ ಒಣಗಿದ ಬಳಿಕ ಮೃದು ನೀರಿನಲ್ಲಿ ಸ್ವಚ್ಛಗೊಳಿಸಿ.
  • ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರಿಂದ ಚರ್ಮವು ನೈಸರ್ಗಿಕವಾಗಿ ಹೊಳಪು ಹಾಗೂ ಮೃದುತ್ವವನ್ನು ಪಡೆದುಕೊಳ್ಳುವಿರಿ.

error: Content is protected !!