ಕೊಡಗಿನಲ್ಲಿ ಮತ್ತೆ ಆಲಿಕಲ್ಲು ರಾಶಿ ಮಳೆ

April 16, 2021

ಮಡಿಕೇರಿ ಏ.16 : ಕೊಡಗಿನ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು, ಆಲಿಕಲ್ಲು ಸಹಿತ ಮಳೆ ಸುರಿದ ಪ್ರದೇಶದಲ್ಲಿ ಕೃಷಿಕ ವರ್ಗ ಕೊಂಚ ಆತಂಕಗೊಂಡಿದೆ.
ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ, ನೆಮ್ಮಲೆ ಸೇರಿದಂತೆ ಸುತ್ತಮುತ್ತಲ ಗ್ರಾಮ ಹಾಗೂ ವಿರಾಜಪೇಟೆ, ಮೂರ್ನಾಡು ಭಾಗದಲ್ಲೂ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಇತ್ತೀಚೆಗೆ ಕೊಡ್ಲಿಪೇಟೆಯಲ್ಲಿ ಸುರಿದ ಮಾದರಿಯಲ್ಲೇ ಆಲಿಕ್ಲುಗಳು ರಾಶಿ ರಾಶಿಯಾಗಿ ಬಿದ್ದ ದೃಶ್ಯ ಕಂಡು ಬಂತು. ಕೆಲವು ಬೆಳೆಗಳಿಗೆ ಆಲಿಕಲ್ಲಿನಿಂದ ಹಾನಿಯಾಗಿದ್ದು, ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನಲ್ಲೂ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ನಗರದಲ್ಲಿ ಸಾಧಾರಣ ಮಳೆ ಸುರಿಯಿತು.

error: Content is protected !!