ವಾಂಗಿ ಬಾತ್ ಮಾಡುವ ವಿಧಾನ

April 17, 2021

ವಾಂಗಿ ಬಾತ್ ಬದನೆಕಾಯಿ ಮತ್ತು ಅನ್ನ ಆಧಾರಿತವಾದ ಖಾದ್ಯ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಾಂಪ್ರದಾಯಿಕ ಪಾಕವಿಧಾನ ಇದು. ಮಾರುಕಟ್ಟೆಯಲ್ಲಿ ದೊರೆಯುವ ವಾಂಗಿ ಬಾತ್ ಪೌಡರ್ ಸಹಾಯದಿಂದ ಬಲು ಸುಲಭವಾಗಿ ವಾಂಗಿ ಬಾತ್ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು : 1 ಕಪ್‌ ಅಕ್ಕಿ, 1/2 ಕಪ್‌ ದುಂಡು ಮೆಣಸಿನಕಾಯಿ,1/2 ಕಪ್‌ ಬದನೆಕಾಯಿ,1/2 ಕಪ್‌, ಬಟಾಣಿ 1/2 ಕಪ್‌, ಆಲೂಗಡ್ಡೆ 1/2 ಕಪ್‌, ತುರಿದ ತೆಂಗಿನಕಾಯಿ 3 ಚಮಚ, ವಾಂಗಿ ಬಾತ್ ಮಸಾಲ,ಅಗತ್ಯಕ್ಕೆ ತಕ್ಕಷ್ಟು ನಿಂಬೆಹಣ್ಣು,ಅಗತ್ಯಕ್ಕೆ ತಕ್ಕಷ್ಟು ಉಪ್ಪು,5 ಚಮಚ ಸಂಸ್ಕರಿಸಿದ ಎಣ್ಣೆ,1/2 ಚಮಚ ಸಾಸಿವೆ,1/2 ಚಮಚ ಉದ್ದಿನ ಬೇಳೆ,1/2 ಚಮಚ ಕಡಲೆ ಬೇಳೆ

ಮಾಡುವ ವಿಧಾನ : ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ.- ಎಣ್ಣೆ ಬಿಸಿಯಾದ ಬಳಿಕ ಉದ್ದಿನ ಬೇಳೆ, ಕಡ್ಲೇ ಬೇಳೆ ಮತ್ತು ಸಾಸಿವೆಯನ್ನು ಹಾಕಿ ಹುರಿಯಿರಿ. ನಂತರ ಬಟಾಣಿ ಮತ್ತು ಆಲೂಗಡ್ಡೆ ಸೇರಿಸಿ, 2 ನಿಮಿಷಗಳ ಕಾಲ ಹುರಿಯಿರಿ.- ನಂತರ ಕ್ಯಾಪ್ಸಿಕಂ, ಬದನೆಕಾಯಿ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ, 2-3 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.- ಎಲ್ಲಾ ತರಕಾರಿಗಳು ಮೃದುವಾಗಿ ಬೇಯುವಂತೆ ನೋಡಿಕೊಳ್ಳಿ.ಅಂಗಡಿಯಿಂದ ಕರೀದಿಸಿದ ವಾಂಗಿ ಬಾತ್ ಪೌಡರ್ ಅಥವಾ ಪುಡಿಯನ್ನು ಸೇರಿಸಿ.- ಅದರೊಟ್ಟಿಗೆ ತಾಜಾ ತೆಂಗಿನ ತುರಿಯನ್ನು ಸೇರಿಸಿ, ಒಂದು ನಿಮಿಷಗಳ ಕಾಲ ಬೇಯಿಸಿ.- ಎಲ್ಲಾ ಪದಾರ್ಥಗಳು ಚೆನ್ನಾಗಿ ಬೆಂದು, ಉತ್ತಮ ಮಿಶ್ರಣವನ್ನಾಗಿ ಮಾಡಿಕೊಂಡ ಬಳಿಕ ನಿಂಬೆ ರಸವನ್ನು ಮಿಶ್ರಗೊಳಿಸಿ. ಪ್ರತ್ಯೇಕವಾದ ಒಂದು ಬಟ್ಟಲು ಅಥವಾ ಪಾತ್ರೆಯಲ್ಲಿ ಅನ್ನವನ್ನು ಮತ್ತು ಬೆಯಿಸಿಕೊಂಡ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

ಸಿದ್ಧವಾದ ವಾಂಗಿ ಬಾತ್ ಅನ್ನು ನಿಮ್ಮ ನೆಚ್ಚಿನ ಚಟ್ನಿ ಅಥವಾ ರೈತಾದೊಂದಿಗೆ ಸವಿಯಬಹುದು.- ನಿಮ್ಮ ಅನುಕೂಲಕ್ಕೆ ತಕ್ಕಂತೆ ಮುಂಜಾನೆಯ ತಿಂಡಿಗೆ ಅಥವಾ ಮಧ್ಯಾಹ್ನದ ಊಟಕ್ಕೆ ಸವಿಯಬಹುದು.

error: Content is protected !!