ಕೋಲಾರದಲ್ಲಿ ಮೇ. 7 ರಿಂದ 12 ವರೆಗೆ ಸೇನಾ ನೇಮಕಾತಿ ರ‍್ಯಾಲಿ

April 17, 2021

ಮಡಿಕೇರಿ ಏ.17 : ಭೂಸೇನಾ ಭರ್ತಿ ಕಾರ್ಯಾಲಯ, ಬೆಂಗಳೂರು ಇವರ ವತಿಯಿಂದ 2021 ರ ಮೇ, 07 ರಿಂದ 12 ರವರೆಗೆ ಕೋಲಾರದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಸೋಲ್ಡಿಯರ್ ಜನರಲ್ ಡ್ಯೂಟಿ, ಟೆಕ್ನಿಕಲ್, ಟ್ರೇಡ್ಸ್ ಮ್ಯಾನ್, ಲಿಪಿಕ, ಸ್ಟೋರ್ ಕೀಪರ್ ಟೆಕ್ನಿಕಲ್ ಹಾಗೂ ನರ್ಸಿಂಗ್ ಅಸಿಸ್ಟೆಂಟ್‍ಗಳಿಗೆ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದೆ.
ಅರ್ಹ ಗಂಡು ಅಭ್ಯರ್ಥಿಗಳು ಏ. 26 ರವರೆಗೆ ಜಾಲತಾಣದಲ್ಲಿ, ಸಾಮಾನ್ಯ ಅಭ್ಯರ್ಥಿಗಳು, ಮಾಜಿ ಸೈನಿಕರ ಮಕ್ಕಳು, ಯುದ್ಧ/ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಯೋಧರ ಮಕ್ಕಳು, ಎನ್‍ಸಿಸಿ ಹಾಗೂ ಕ್ರೀಡಾಪಟುಗಳಿಗೆ ಅವಕಾಶವಿದ್ದು, ಅರ್ಜಿಗಳನ್ನು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಜಾಲತಾಣ www.joinindianarmy.nic.in ಹಾಗೂ ದೂ.ಸಂಖ್ಯೆ 08025596517 ನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!