ಕರಡು ಮತದಾರರ ಪಟ್ಟಿ ಪ್ರಕಟ

April 17, 2021

ಮಡಿಕೇರಿ ಏ.17 : ಮಡಿಕೇರಿ ತಾಲ್ಲೂಕಿನ ಏಳು ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹಾಗೂ ಹತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರಗಳಿಗೆ 2021 ರ ಚುನಾವಣೆ ನಿಮಿತ್ತ ಕ್ಷೇತ್ರವಾರು ಪುನರ್ ವಿಂಗಡಣೆಯಾಗಿರುವಂತೆ ಸುಮುಖ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕರಿಂದ ಕರಡು ಮತದಾರರ ಪಟ್ಟಿಯನ್ನು ಮುದ್ರಿಸಿಕೊಂಡು ಏಪ್ರಿಲ್, 17 ರಂದು ತಾಲ್ಲೂಕು ಕಚೇರಿ ಹಾಗೂ ನಾಡ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರಚುರಪಡಿಸಲಾಗಿದೆ.
ಕರಡು ಮತದಾರರ ಪ್ರಕಟಣೆಯ ಸಂಬಂಧ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಏಪ್ರಿಲ್, 22 ರ ಒಳಗೆ ತಾಲ್ಲೂಕು ಕಚೇರಿಗೆ ಸಲ್ಲಿಸಬಹುದಾಗಿದೆ. ಇತ್ಯರ್ಥಪಡಿಸಿದ ನಂತರ ಏಪ್ರಿಲ್, 30 ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಅವರು ತಿಳಿಸಿದ್ದಾರೆ.

error: Content is protected !!