ಮರದಿಂದ ಬಿದ್ದು ಯುವಕ ದುರ್ಮರಣ

April 17, 2021

ಮಡಿಕೇರಿ ಏ.17 : ಮಾವಿನ ಎಲೆ ಕೊಯ್ಯಲು ಮರವೇರಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ತೋಮರ ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ತಾಲ್ಲೂಕಿನ ಗಾಳಿಬೀಡು ನಿವಾಸಿ ಕುಡಿಯರ ತಮ್ಮಿ ಎಂಬವರ ಪುತ್ರ ಕುಡಿಯರ ಚರಣ್(29)ಎಂಬಾತನೆ ಸಾವನ್ನಪ್ಪಿರುವ ದುರ್ದೈವಿ.
ಮಾವಿನ ಎಲೆಗಾಗಿ ಮರವೇರಿ ಕೆಳಕ್ಕುರುಳಿದ ಆತನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!