ಹೊಲಿಗೆ ತರಬೇತಿ ಪಡೆದಿರುವವರಿಗೆ ಗುಡ್ ನ್ಯೂಸ್ : ಇಲ್ಲಿದೆ ಉದ್ಯೋಗಾವಕಾಶ …

April 18, 2021


ಮಡಿಕೇರಿ. ಏ.18 :  2018 ರ ಆಗಸ್ಟ್ ನಲ್ಲಿ ಸಂಭವಿಸಿದ ಪ್ರಕ್ರತಿ ವಿಕೋಪದಲ್ಲಿ ತೋಟ, ಗದ್ದೆ ಹಾನಿಗೊಳಗಾಗಿ ಆದಾಯ ಮೂಲ ಕಳೆದುಕೊಂಡ ಕಾಲೂರು ಗ್ರಾಮದ ಸಂತ್ರಸ್ತ ಮಹಿಳೆಯರಿಗೆ ಭಾರತೀಯ ವಿದ್ಯಾಭವನ ಪ್ರಾಜೆಕ್ಟ್ ಕೂಗ್೯ ಸ್ವಾವಲಂಬಿ ಜೀವನದ ಪಯಾ೯ಯ ಮಾಗ೯ ರೂಪಿಸಿಕೊಟ್ಟಿತ್ತು.
ಈಗಾಗಲೇ ಹೊಲಿಗೆಯಲ್ಲಿ ಉತ್ತಮ ತರಬೇತಿ ಪಡೆದುಕೊಂಡಿದ್ದರೂ  ಕರೋನಾ ಹಿನ್ನಲೆಯಲ್ಲಿ  ಈಗಿನ ದಿನಗಳಲ್ಲಿ ನಿರುದ್ಯೋಗ ಎದುರಿಸುತ್ತಿರುವ ಮಹಿಳೆಯರಿಗೆ  ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಮಡಿಕೇರಿಯಲ್ಲಿಯೇ ಹೊಲಿಗೆ ಸಂಬಂಧಿತ  ಉದ್ಯೋಗಾವಕಾಶ ಕಲ್ಪಿಸಲು  ಉದ್ದೇಶಿಸಲಾಗಿದೆ. 
ಹೊಲಿಗೆ ತರಬೇತಿ ಪಡೆದಿರುವ ಆಸಕ್ತ ಮಹಿಳೆಯರು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಸಮೀಪದಲ್ಲಿರುವ    ಭಾರತೀಯ ವಿದ್ಯಾಭವನದ ಕಛೇರಿ ಅವಧಿಯಲ್ಲಿ (ಬೆಳಗ್ಗೆ 10 ರಿಂದ ಸಂಜೆ 5 ಗಂಟೆ)  ಮೇ 5 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪಕ೯ ಸಂಖ್ಯೆ-  93803  54259

error: Content is protected !!