ಆರೋಗ್ಯದ ವೃದ್ಧಿಗೆ ಮೀನಿನ ಎಣ್ಣೆ ಸಹಕಾರಿ

April 19, 2021

ಮೀನು ತಿಂದರೆ ದೊರೆಯುವ ಪ್ರಮುಖ ಗುಣಗಳು ಸಲ್ಮೋನ್, ಹೆರ್ರಿಂಗ್, ವೈಟ್ ಫಿಶ್, ಆಂಕೋವಿವ್ಸ್, ಸಾರ್ಡ್ನಿಸ್ ಗಳಂತ ವಿಶೇಷ ಮೀನುಗಳಿಂದ ತಯಾರಿಸಲ್ಪಡುವ ಎಣ್ಣೆ. 

ವಿಶ್ವ ಆರೋಗ್ಯ ಸಂಸ್ಥೆ ವಾರಕ್ಕೆ ಒಂದರಿಂದ ಎರಡು ಮೀನು ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದೆ. ಫಿಶ್ ಆಯಿಲ್ 30 ಶೇಕಡಾದಷ್ಟು ಮೀನಿನ ಎಣ್ಣೆ ಅಂಶದಿಂದಲೂ, ಉಳಿದ 70 ಶೇಕಡಾ ಇತರೆ ಅಗತ್ಯ ನ್ಯೂಟ್ರಿಯಂಟ್ಸ್ ಗಳಿಂದಲೂ ತಯಾರಿಸಲ್ಪಡುತ್ತೆ.

ಉತ್ತಮ ಆರೋಗ್ಯ ಹಾಗೂ ಚರ್ಮದ ರಕ್ಷಣೆಗಾಗಿ ಮೀನಿನ ಎಣ್ಣೆಯನ್ನು ಬಳಸುತ್ತಾರೆ. ಮೀನಿನ ಎಣ್ಣೆ ಆರೋಗ್ಯ ವೃದ್ಧಿಗೆ ಸಹಾಯ ಮಾಡುವುದು. ಇದರ ಬಳಕೆಯು ಕೆಲವು ಗಮನಾರ್ಹ ಪರಿಣಾಮವನ್ನು ಬೀರುತ್ತವೆ. ಈ ಕುರಿತು ಜರ್ನಲ್ ಪ್ಲೋಸ್ ಜೆನೆಟಿಕ್ ಸಂಸ್ಥೆ ಒಂದು ಅಧ್ಯಯನವನ್ನು ನಡೆಸಿತು. ಈ ಅಧ್ಯಯನಗಳ ಪ್ರಕಾರ ಕೆಲವು ಕುತೂಹಲಕಾರಿ ಸಂಗತಿಯು ಆವಿಷ್ಕರಿಸಲ್ಪಟ್ಟಿತು.

ಮೀನಿನ ಎಣ್ಣೆ ಒಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿರುತ್ತದೆ. ಇದು ಟ್ರೈಗ್ಲಿಸರೈಡ್ ಅನ್ನು ಕರಗಿಸಲು ಸಹಾಯ ಮಾಡುವುದು. ರಕ್ತದಲ್ಲಿನ ಕೊಬ್ಬು, ರಕ್ತ ಸಂಚಾರ, ಹೃದಯ ಆರೋಗ್ಯ ಸೇರಿದಂತೆ ವಿವಿಧ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವುದು.

ರಕ್ತದಲ್ಲಿ ಒಮೆಗಾ-3 ಸಮೃದ್ಧವಾಗಿ ಇದ್ದರೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯು ನಿವಾರಣೆಯಾಗುವುದು. ಈ ನಿಟ್ಟಿನಲ್ಲಿಯೇ ಅನೇಕ ಜನರು ಮೀನಿನ ಎಣ್ಣೆಯನ್ನು ಹಾಗೂ ಮೀನಿನ ಆಹಾರವನ್ನು ಅಧಿಕ ಪ್ರಮಾಣದಲ್ಲಿ ಸೇವಿಸುತ್ತಾರೆ.ನಿರ್ದಿಷ್ಟ ಆನುವಂಶಿಕ ಹಿನ್ನೆಲೆ ಹೊಂದಿರುವವರಿಗೆ ಉತ್ತಮ ಪರಿಣಾಮ ಬೀರುವುದು. ಟ್ರೈ ಗ್ಲಿಸರೈಡ್ ಅನ್ನು ಕರಗಿಸಲು ಸಹಾಯ ಮಾಡುವುದು. ಅದೇ ಸರಿಯಾದ ಜೆನೆಟಿಕ್ ಹೊಂದಿಲ್ಲದಿದ್ದರೆ ಮೀನಿನೆಣ್ಣೆಯನ್ನು ತೆಗೆದುಕೊಂಡರೆ ಟ್ರೈಗ್ಲಿಸರೈಡ್ ಹೆಚ್ಚುವ ಸಾಧ್ಯತೆಗಳಿರುತ್ತವೆ.

error: Content is protected !!