ಪ್ರತಿದಿನ ಬೆಲ್ಲವನ್ನು ತಿನ್ನುವುದರಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳು

April 20, 2021

ಬೆಲ್ಲ ಒಂದು ನೈಸರ್ಗಿಕ ಸಿಹಿ ಪದಾರ್ಥ. ಹೆಚ್ಚಾಗಿ ಕಬ್ಬಿನಿಂದ ತಯಾರಾಗುವ ಇದು ಹಬ್ಬ-ಹರಿದಿನಗಳಲ್ಲಿ ಜನರಿಗೆ ನೆನಪಿಗೆ ಬರುತ್ತದೆ. ಬಗೆಬಗೆಯ ಸಿಹಿತಿಂಡಿಗಳನ್ನು ಮತ್ತು ವಿಶೇಷವಾದ ಸಿಹಿ ಅಡುಗೆಗಳನ್ನು ತಯಾರು ಮಾಡುವ ಸಂದರ್ಭದಲ್ಲಿ ಬೆಲ್ಲ ಬಳಕೆ ಆಗುತ್ತದೆ.

ಆದರೆ ಪ್ರತಿದಿನ ನಿಯಮಿತವಾಗಿ ಬೆಲ್ಲದ ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಜನರಿಗೆ ಸಿಗುತ್ತವೆ. ಅಷ್ಟೇ ಅಲ್ಲದೆ ಬಹಳ ಹಿಂದಿನ ಕಾಲದಿಂದಲೂ ಸಹ ಬೆಲ್ಲದ ಪ್ರಭಾವದಿಂದ ಹೇಗೆ ನಮ್ಮ ಜೀರ್ಣಾಂಗ ವ್ಯವಸ್ಥೆ ಅಚ್ಚುಕಟ್ಟಾಗಿ ಕೆಲಸ ಮಾಡಲಿದೆ ಎಂಬುದಕ್ಕೆ ಆಯುರ್ವೇದ ಪದ್ಧತಿಯ ಪುರಾವೆಯಿದೆ. ಬೆಲ್ಲ ತಿನ್ನುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಬೆಲ್ಲದಲ್ಲಿ ದೇಹದ ತೂಕವನ್ನು ಸ್ವಲ್ಪ ಹೆಚ್ಚು ಮಾಡುವ ಗುಣವಿದೆ.

ದೇಹದ ಜೀರ್ಣಾಂಗದಲ್ಲಿ ಆಹಾರವನ್ನು ಜೀರ್ಣ ಮಾಡಲು ಮತ್ತು ಕರುಳು ಸರಿಯಾದ ರೀತಿಯಲ್ಲಿ ಚಲಿಸಲು ಅಗತ್ಯವಾಗಿ ಬೇಕಾದ ಕೆಲವೊಂದು ಆಮ್ಲೀಯ ಅಂಶಗಳನ್ನು ಉತ್ಪತ್ತಿ ಮಾಡಬೇಕಾಗುತ್ತದೆ. ನೀವು ಸೇವಿಸಿದ ಆಹಾರ ಜೀರ್ಣಾಂಗ ಪ್ರವೇಶ ಆದ ತಕ್ಷಣ ನಿಧಾನವಾಗಿ ತನ್ನಲ್ಲಿರುವ ಪೌಷ್ಠಿಕಾಂಶಗಳನ್ನು ಇಡೀ ದೇಹದ ತುಂಬಾ ರಕ್ತ ಸಂಚಾರದ ಮೂಲಕ ಹೀರಿಕೊಳ್ಳುವಂತೆ ಮಾಡುತ್ತದೆ.

ಬಹಳ ದೀರ್ಘಕಾಲದಿಂದ ಕಬ್ಬಿಣದ ಅಂಶದ ಕೊರತೆ ಯಿಂದ ಬಳಲುತ್ತಿರುವವರು ಪ್ರತಿ ದಿನವೂ ನಿಯಮಿತವಾಗಿ ಬೆಲ್ಲವನ್ನು ಯಾವುದಾದರೂ ಒಂದು ರೂಪದಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಪ್ರತಿದಿನ ಅಗತ್ಯವಾಗಿ ಬೇಕಾದಂತಹ ಕಬ್ಬಿಣದ ಅಂಶ ದೇಹಕ್ಕೆ ಸಿಗುತ್ತಾ ಹೋಗುತ್ತದೆ. ಕ್ರಮೇಣವಾಗಿ ಕಬ್ಬಿಣದ ಅಂಶದ ಕೊರತೆ ಕೂಡ ಕಡಿಮೆಯಾಗುತ್ತದೆ.

ಬೆಲ್ಲವನ್ನು ಸೇವನೆ ಮಾಡುವುದರಿಂದ ಕೇವಲ ದೇಹದಲ್ಲಿ ಮಾತ್ರವಲ್ಲದೆ ನಮ್ಮ ಲಿವರ್ ಭಾಗದಲ್ಲೂ ಕೂಡ ಸ್ವಚ್ಛತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ಹೇಳಬಹುದು.

ದೇಹದ ತಾಪಮಾನವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ಮಾಡಲು ಮತ್ತು ಶೀತ ವಾತಾವರಣದಿಂದ ದೂರ ಮಾಡಲು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಸಣ್ಣ ನಿಂಬೆಹಣ್ಣಿನ ಗಾತ್ರದ ಬೆಲ್ಲದ ಚೂರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಲು ಕೊಡಬೇಕು. ಇದರಿಂದ ಅತ್ಯುತ್ತಮವಾದ ಆರೋಗ್ಯ ಪ್ರಯೋಜನಗಳು ಬಹಳ ಶೀಘ್ರವಾಗಿ ಲಭಿಸುತ್ತವೆ.

 ಬೆಲ್ಲವನ್ನು ಸೇವನೆ ಮಾಡುವುದರಿಂದ ಸರಿಹೊಂದುವಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುವತ್ತ ನಮ್ಮ ದೇಹ ಪ್ರಯತ್ನಿಸುತ್ತದೆ. ಹೀಗಾಗಿ ಮುಟ್ಟಿನ ಸಮಸ್ಯೆಗೆ ಮುಂಚಿತವಾಗಿ ಕಂಡುಬರುವ ಇಂತಹ ರೋಗ ಲಕ್ಷಣಗಳು ಬೆಲ್ಲದಿಂದ ಮಾಯವಾಗುತ್ತದೆ ಎಂದು ಹೇಳಬಹುದು.

ಬೆಲ್ಲದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಮತ್ತು ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಜೊತೆಗೆ ಜಿಂಕ್ ಮತ್ತು ಸೆಲೆನಿಯಮ್ ಅಂಶಗಳು ಕೂಡ ಇರುವುದರಿಂದ ಈ ಎಲ್ಲಾ ಅಂಶಗಳು ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುವ ಆಂಟಿಆಕ್ಸಿಡೆಂಟ್ ಅಂಶಗಳಾಗಿ ಕೆಲಸ ಮಾಡುತ್ತವೆ.
ಇದರಿಂದ ನಮ್ಮ ದೇಹದಲ್ಲಿ ಸೋಂಕುಗಳ ವಿರುದ್ಧ ರಕ್ಷಣಾತ್ಮಕ ಪ್ರಭಾವ ಎನಿಸಿಕೊಂಡ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತ ಹೋಗುತ್ತದೆ.

error: Content is protected !!