ಸೋಮವಾರಪೇಟೆ ಅಂಗಡಿ, ಹೊಟೇಲ್ ಗಳಿಗೆ ಬಿತ್ತು ದಂಡ

April 29, 2021

ಮಡಿಕೇರಿ ಏ.29 : ಕೊವೀಡ್ ನಿಯಮಗಳನ್ನು ಮೀರಿದ, ಹೊಟೇಲ್ ಮತ್ತು ಅಂಗಡಿ ಮಾಲೀಕರಿಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಅವರುಗಳು ದಂಡ ವಿಧಿಸಿದರು. ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು.
ಆಸ್ಪತ್ರೆಗೆ ಚಿಕಿತ್ಸೆಗೆ ಬಂದವರು ಹಾಗು ಅವರು ವಾಹನಗಳ ಓಡಾಟ ಪಟ್ಟಣದಲ್ಲಿ ಕಂಡುಬ0ತು. ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಖಾಸಗಿ ಕ್ಲಿನಿಕ್‌ವೊಂದರ ಮುಂಭಾಗದ ರಸ್ತೆಯಲ್ಲಿ ರೋಗಿಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂತು. ಕಟ್ಟಡ ಕಾರ್ಮಿಕರು ದೈನಂದಿನ ಕೆಲಸದಲ್ಲಿ ತೊಡಗಿರುವುದು ಕಂಡು ಬಂತು. ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದವು. ಕಾಮಗಾರಿಗಳು ಎಂದಿನ0ತೆ ನಡೆದವು.

error: Content is protected !!