ಸೋಮವಾರಪೇಟೆಯಲ್ಲಿ ಕೋವಿಡ್ ಸೋಂಕಿತ ಅಪರಿಚಿತ ಶವ !

May 2, 2021

ಸೋಮವಾರಪೇಟೆ ಮೇ 2 : ಸೋಮವಾರಪೇಟೆ ಪಟ್ಟಣದ ಮಾರುಕಟ್ಟೆಯಲ್ಲಿ ಕೋವಿಡ್ ಸೋಂಕಿತ ಮೃತದೇಹಕ್ಕೆ ಪಟ್ಟಣ ಪಂಚಾಯ್ತಿ ಹಾಗೂ ಸೇವಾಭಾರತಿ ತಂಡ ಅಂತಿಮಸಂಸ್ಕಾರ ನೆರವೇರಿಸಿತು. 

ಶನಿವಾರದಂದು ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಸುಮಾರು 60ವರ್ಷದ ಅಪರಿಚಿತ ಪುರುಷರೊಬ್ಬರು ಮೃತಪಟ್ಟಿದ್ದು ಅಂತ್ಯಕ್ರಿಯೆಗು ಮುನ್ನ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡ ನಂತರ ಕರ್ಕಳ್ಳಿಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಸೇವಾಭಾರತಿ ತಂಡದ ಉಮೇಶ್, ಮಹೇಶ್ ತಿಮ್ಮಯ್ಯ, ಮನು ರೈ, ಶ್ರೀನಿಧಿ ಲಿಂಗಪ್ಪ, ದರ್ಶನ್ ಜೋಯಪ್ಪ, ರಜಿ ತೋಳೂರು, ಸಂತೋಷ ರೈ, ಸಂತೋಷ ರವರುಗಳು ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದರು.

error: Content is protected !!