ಕೊಡಗಿನಲ್ಲಿ ಮಳೆ : ಮರ ಬಿದ್ದು ಕಾರು ಜಖಂ

May 4, 2021

ಮಡಿಕೇರಿ ಮೇ 4 : ಕೊಡಗು ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಮಳೆಯಾಗಿದ್ದು, ಕೆಲವು ಕಡೆ ಮರಗಳು ಬಿದ್ದು ಹಾನಿ ಸಂಭವಿಸಿದೆ.
ತ್ಯಾಗತ್ತೂರು ಗ್ರಾಮದಲ್ಲಿ ಅನಿಲ್ ಎಂಬುವವರಿಗೆ ಸೇರಿದ ಮಾರುತಿ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದು, ಕಾರು ಸಂಪೂರ್ಣ ಜಖಂ ಗೊಂಡಿದೆ. ಸಿದ್ದಾಪುರ, ಅಭ್ಯತ್ ಮಂಗಲ, ತ್ಯಾಗತ್ತೂರು, ಪಾಲಿಬೆಟ್ಟ, ನಾಪೋಕ್ಲು ಸೇರಿದಂತೆ ವಿವಿಧೆಡೆ ತೋಟಗಳಲ್ಲಿ ಮರಗಳು ಬಿದ್ದಿವೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಮAಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 13.32 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ 15 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 4.27 ಮಿ.ಮೀ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ 20.7 ಮಿ.ಮೀ. ಮಳೆಯಾಗಿದೆ.
::: ಹೋಬಳಿವಾರು ದಾಖಲಾಗಿರುವ ಮಳೆ :::
ಮಡಿಕೇರಿ ಕಸಬಾ 23.6, ಸಂಪಾಜೆ 5, ನಾಪೋಕ್ಲು 27.8, ಭಾಗಮಂಡಲ 3.6, ವಿರಾಜಪೇಟೆ ಕಸಬಾ 4.6, ಶ್ರೀಮಂಗಲ 0.39, ಅಮ್ಮತ್ತಿ 7.5, ಹುದಿಕೇರಿ 0.55, ಬಾಳೆಲೆ 0.60, ಪೊನ್ನಂಪೇಟೆ 12, ಸೋಮವಾರಪೇಟೆ 19.8, ಶಾಂತಳ್ಳಿ 30, ಕೊಡ್ಲಿಪೇಟೆ 21.2, ಶನಿವಾರಸಂತೆ 5.4, ಕುಶಾಲನಗರ 17.8 ಸುಂಟಿಕೊಪ್ಪ 30 ಮಿ.ಮೀ.ಮಳೆಯಾಗಿದೆ.
::: ಹಾರಂಗಿ ಜಲಾಶಯದ ನೀರಿನ ಮಟ್ಟ :::
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2819.80 ಅಡಿಗಳು, ಹಾರಂಗಿಯಲ್ಲಿ ಬಿದ್ದ ಮಳೆ 6.4 ಮಿ.ಮೀ. ಇಂದಿನ ನೀರಿನ ಒಳಹರಿವು 213 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್. ನಾಲೆಗೆ 50 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು 100 ಕ್ಯುಸೆಕ್.

error: Content is protected !!