2 ದಿನ ಕೊಡಗಿನ ಈ ಊರುಗಳಲ್ಲಿ ವಿದ್ಯುತ್ ಇರಲ್ಲ

May 4, 2021

ಮಡಿಕೇರಿ ಮೇ 4 : ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯತ್ ವಿತರಣಾ ಕೇಂದ್ರದ ಫಿಡರ್‌ಗಳಲ್ಲಿ ತುರ್ತು ನಿವಾಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ಮೇ 5 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.
ಭಾಗಮಂಡಲ, ನಾಪೋಕ್ಲು, ಕಾವೇರಿ(ಕುಶಾಲನಗರ), ಸಿದ್ದಲಿಂಗಪುರ, ಮಾದಾಪುರ, ಇಂಜಲಗೇರಿ(ಸಿದ್ದಾಪುರ), ಚೆಂಬೆಳ್ಳೂರು, ಗೋಣಿಕೊಪ್ಪ, ಹಾತೂರು, ನಲ್ಲೂರು ಮತ್ತು ಹೈಸೂಡ್ಲುರು ಫೀಡರ್‌ಗಳ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ.
ಪೊನ್ನಂಪೇಟೆ 33/11ಕೆವಿ ಮತ್ತು ಹಂಡ್ಲಿ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ, ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳ ಬೇಕಿರುವುದರಿಂದ ಮೇ 6 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ, ಶಾಂತಳ್ಳಿ, ಬೆಟ್ಟದಹಳ್ಳಿ, ಕಿರಗಂದೂರು, ದುಂಡಳ್ಳಿ, ದೊಡ್ಡಳ್ಳಿ ಮೂದರಹಳ್ಳಿ, ಕುಮಾರಳ್ಳಿ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅವರು ಕೋರಿದ್ದಾರೆ.

error: Content is protected !!