10 ಆಮ್ಲಜನಕ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಿ ಮಾನವೀಯತೆ ಮೆರೆದ ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘ

May 4, 2021

ಸುಂಟಿಕೊಪ್ಪ ಮೇ 4 : ರಾಜ್ಯದಲ್ಲಿ ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಅಸುನೀಗುತ್ತಿರುವುದನ್ನು ಮನಗಂಡು ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘ 10 ಆಮ್ಲಜನಕ ಸಿಲಿಂಡರ್ ಗಳನ್ನು ಉಚಿತವಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಸಂಘದ ಪ್ರಮುಖರು 10 ಆಮ್ಲಜನಕ ಸಿಲಿಂಡರ್ ಗಳನ್ನು ಕುಶಾಲನಗರ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಹಸ್ತಾಂತರಿಸಿದರು. ಇದು ಆಮ್ಲಜನಕವನ್ನು ಭರ್ತಿ ಮಾಡಿ ರೋಗಿಗಳಿಗೆ ನೀಡಲು ಸಹಕಾರಿಯಾಗಿದೆ.
ಸಂಘದ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

error: Content is protected !!