ಮರೆಯಾದ ಮಂಜು …

May 4, 2021

ಮಡಿಕೇರಿ ಮೇ 4 : ಅತ್ಯಂತ ಉತ್ಸಾಹಿಯಾಗಿ, ಭವಿಷ್ಯದ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದ ಪಿಗ್ಮಿ ಸಂಗ್ರಹಗಾರ ಮಂಜುನಾಥ್ (ಮಂಜು) (48) ಅವರು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ.
ಮಡಿಕೇರಿ ಆಟೋ ಚಾಲಕರ ಸಂಘದ ಪದಾಧಿಕಾರಿಯಾಗಿ ಮತ್ತು ಪಿಎಲ್ ಡಿ ಬ್ಯಾಂಕ್ ನ ಪಿಗ್ಮಿ ಸಂಗ್ರಹಗಾರರಾಗಿ ಕಾರ್ಯನಿರ್ವಸುತ್ತಿದ್ದ ಮಂಜು ಅವರ ಅಕಾಲಿಕ ಅಗಲಿಕೆಯನ್ನೂ ಯಾರೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಟೋ ಚಾಲಕರು, ಪಿಗ್ಮಿ ಸಂಗ್ರಹಗಾರರು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಜನಾನುರಾಗಿ ಮಂಜು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

error: Content is protected !!