ನಿವೃತ್ತ ನ್ಯಾಯಮೂರ್ತಿ ಮಾಳೇಟಿರ ಚಿಣ್ಣಪ್ಪ ನಿಧನಕ್ಕೆ ಸಂತಾಪ

May 5, 2021

ಮಡಿಕೇರಿ ಮೇ 5 : ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಮಾಳೇಟಿರ ಚಿಣ್ಣಪ್ಪ ನಿಧನಕ್ಕೆ ಮಡಿಕೇರಿ ವಕೀಲರ ಸಂಘ ಸಂತಾಪ ಸೂಚಿಸಿದೆ.
ಮಾಳೇಟಿರ ಚಿಣ್ಣಪ್ಪ ಅವರು ಮಡಿಕೇರಿಯಲ್ಲಿ ವಕೀಲ ವೃತ್ತಿ ಆರಂಭಿಸಿ, ಜಿಲ್ಲಾ ನ್ಯಾಯಾಧೀಶರಾಗಿ, ನಂತರ ಹೈಕೋರ್ಟ್ನ ವಿವಿಧ ವಿಭಾಗದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.
ವಕೀಲರ ಸಂಘದ ವತಿಯಿಂದ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಕೆ.ಡಿ.ದಯಾನಂದ ಮತ್ತು ಕಾರ್ಯದರ್ಶಿ ಎಂ.ಕೆ.ಅರುಣ್ ಕುಮಾರ್ ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.

error: Content is protected !!