ಮೇ 7 ರಂದು ಕೊಡಗಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

May 5, 2021

ಮಡಿಕೇರಿ ಮೇ 5 : ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯತ್ ವಿತರಣಾ ಕೇಂದ್ರದ ಫಿಡರ್‌ಗಳಲ್ಲಿ ತುರ್ತು ನಿವಾಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ಮೇ 7 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.
ಸಂಪಾಜೆ, ಸೋಮೇಶ್ವರ, ಭುವನಗಿರಿ, ಆಲೂರು ಸಿದ್ದಾಪುರ ಹೊಸಕೋಟೆ, ನೆಲ್ಲಿಹುದಿಕೇರಿ, ಮಾಲ್ದಾರೆ, ಆಬ್ಬೂರುಕಟ್ಟೆ, ಪಾಲಂಗಾಲ, ಬಾಳೆಲೆ, ತಿತಿಮತಿ ಮತ್ತು ಕುಟ್ಟ ಫೀಡರ್‌ಗಳ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ.

error: Content is protected !!