ಕೊಡಗಿನಲ್ಲಿ ಕೋವಿಡ್ ಕರ್ಫ್ಯೂ : ವಾಹನಗಳ ತಪಾಸಣೆ

May 5, 2021

ಸುಂಟಿಕೊಪ್ಪ ಮೇ 5 : ಕೊಡಗಿನಲ್ಲಿ ಕೋವಿಡ್ ಕರ್ಫ್ಯೂ ಜಾರಿಯಲ್ಲಿದ್ದು, ಮಂಗಳವಾರ ಮತ್ತು ಶುಕ್ರವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಆದೇಶಿಸಿರುವುದರಿಂದ ಬುಧವಾರ ಜನ ಸಂಚಾರ ವಿರಳವಾಗಿತ್ತು.
ಸುಂಟಿಕೊಪ್ಪದಲ್ಲಿ ಸರಕಾರಿ ಕಛೇರಿ, ಸಹಕಾರ ಬ್ಯಾಂಕ್, ರಾಷ್ಟಿçÃಕೃತ ಬ್ಯಾಂಕ್, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಸೆಸ್ಕ್ ಕಛೇರಿಗÀಳು ಕಾರ್ಯನಿರ್ವಹಿಸಿದವು. ಖಾಸಗಿ ಕ್ಲಿನಿಕ್ ಮತ್ತು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗಿತ್ತು. ಪೊಲೀಸರು ತೀವ್ರ ನಿಗಾ ವಹಿಸಿದ್ದರಲ್ಲದೆ ದ್ವಿಚಕ್ರ ಸೇರಿದಂತೆ ಕಾರು ಜೀಪುಗಳಲ್ಲಿ ಆಗಮಿಸಿದವರನ್ನು ವಿಚಾರಿಸಿ ಕಳುಹಿಸುತ್ತಿದ್ದರು.

error: Content is protected !!