ಪೊನ್ನಂಪೇಟೆ ಬೆಸಗೂರು ಗ್ರಾಮದಲ್ಲಿ ಬಾಲ ಕಾರ್ಮಿಕ ಜೀತ ಪದ್ಧತಿ ಜೀವಂತ

May 5, 2021

ಮಡಿಕೇರಿ ಮೇ 5 : ಇಲಾಖೆಗೆ ಬಂದ ದೂರನ್ನು ಆಧರಿಸಿ ಪೊನ್ನಂಪೇಟೆ ತಹಶೀಲ್ದಾರರ ನೇತೃತ್ವದಲ್ಲಿ ತಾಲ್ಲೂಕಿನ ಬೆಸಗೂರು, ಹೈಸೊಡ್ಲೂರು ಗ್ರಾಮಗಳ ಕಾಫಿ ತೋಟ ಹಾಗೂ ಮನೆಗಳಲ್ಲಿ ತಪಾಸಣೆ ನಡೆಸಿ ನಾಲ್ವರು ಮಕ್ಕಳನ್ನು ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಧೆಯ  ಕಾರ್ಮಿಕ ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದೆ ಎಂದು ಕೊಡಗು ಪೊಲೀಸ್ ಇಲಾಖೆ ತಿಳಿಸಿದೆ.  ಸದರಿ ಕಾರ್ಯಾಚರಣೆಯಲ್ಲಿ ಮನೆ ಕೆಲಸಗಳಲ್ಲಿ ನಿರತರಾಗಿದ್ದ ನಾಲ್ಕು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ, ಪೋಷಣೆ ಹಾಗೂ ರಕ್ಷಣೆಯ ಉದ್ದೇಶದಿಂದ ಮಡಿಕೇರಿಯಲ್ಲಿರುವ ಸರ್ಕಾರಿ ಬಾಲಮಂದಿರದಲ್ಲಿ ಪುನರ್ವಸತಿಗೊಳಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಕು. ಕಾವ್ಯರಾಣಿ, ತಹಶಿಲ್ದಾರರು ಪೊನ್ನಂಪೇಟೆ ವೃತ್ತ, ಜಯಣ್ಣ, ಹಿರಿಯ ಕಾರ್ಮಿಕ ನಿರೀಕ್ಷಕರು, ವಿರಾಜಪೇಟೆ ವೃತ್ತ, ಸುಮತಿ, ವಿಶೇಷ ಪೋಲಿಸ್, ವಿಶೇಷ ಮಕ್ಕಳ ಪೋಲಿಸ್ ಘಟಕ, ಆರ್ ಶೀರಾಝ್ ಅಹ್ಮದ್ ಯೋಜನಾ ನಿರ್ದೇಶಕರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕಿರಣ್ ಮಕ್ಕಳ ರಕ್ಷಣಾ ಘಟಕ, ಡಿ ಕುಮಾರ್, ಪಿಎಸ್ಐ, ಕೆ ಕೆ ಗಣಪತಿ, ಎಎಸ್ಐ, ಪೊನ್ನಂಪೇಟೆ ಠಾಣೆ  ಹಾಗೂ ಇತರ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇವರ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಶ್ಲಾಘಿಸಿದ್ದಾರೆ.

error: Content is protected !!