ಕುಂಬಳಗೇರಿ ಉಕ್ಕುಡ ಗ್ರಾಮಾಭಿವೃದ್ಧಿ ಸಮಿತಿಯಿಂದ ಕಿಟ್ ವಿತರಣೆ

May 6, 2021

ಮಡಿಕೇರಿ ಮೇ 6 : ಮಡಿಕೇರಿ ನಗರದ ಕುಂಬಳಗೇರಿ ಉಕ್ಕುಡದ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಕೋವಿಡ್ ಸೋಂಕಿತರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಮನೆಗಳಿಗೆ ತೆರಳಿದ ಸಮಿತಿಯ ಪ್ರಮುಖರು ಕೋವಿಡ್ ನಿಯಮ ಪಾಲನೆಯೊಂದಿಗೆ ಕಿಟ್ ಗಳನ್ನು ನೀಡಿದರು.
ಸಮಿತಿಯ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಎಸ್.ಎಂ.ದೇವರಾಜ್ ಮತ್ತಿತರ ಪ್ರಮುಖರು ಹಾಜರಿದ್ದರು.

error: Content is protected !!