ಸೋಮವಾರಪೇಟೆ ಕೋವಿಡ್ ಕೇರ್ ಸೆಂಟರ್ ಗೆ 100 ಬೆಡ್ ಗಳ ವ್ಯವಸ್ಥೆ

May 6, 2021

ಸೋಮವಾರಪೇಟೆ ಮೇ 6 : ಸೋಮವಾರಪೇಟೆ ಪಟ್ಟಣ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಅವಶ್ಯವಿರುವ ವೈದ್ಯರು ಮತ್ತು ಸಿಬ್ಬಂದಿಗಳ ನೇಮಕ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
ಗುರುವಾರ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಕೋವಿಡ್ ಕೇರ್ ಸೆಂಟರ್‌ಗೆ 100 ಬೆಡ್‌ಗಳ ವ್ಯವಸ್ಥೆ ಮಾಡಬೇಕು. ಈಗ ಎರಡು ಆಂಬ್ಯುಲೆನ್ಸ್ಗಳಿದ್ದು, ಇನ್ನೆರಡನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ವೈದ್ಯರು, ನಾಲ್ಕು ದಾದಿಯರು, ಎರಡು ಸಿಬ್ಬಂದಿಗಳು ಕೋವಿಡ್ ಸೋಂಕಿತರಾಗಿದ್ದಾರೆ. ಕೋವಿಡ್ ಸೆಂಟರ್‌ನಲ್ಲಿ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 24 ಅಮ್ಲಜನಕ ಸಿಲಿಂಡರ್‌ಗಳು ದಾಸ್ತಾನು ಇದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ರವೀಂದ್ರ ಹೇಳಿದರು.
ಕೋವಿಡ್-19 ಸೋಂಕು ಸಂಬAಧ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಬೇಕು.ಕೋವಿಡ್ ಸಂದರ್ಭ ವೈದ್ಯರು ಮತ್ತು ಅರೋಗ್ಯ ಸಿಬ್ಬಂದಿಗಳ ಸೇವೆಯನ್ನು ನಾವೆಲ್ಲಾ ಗೌರವಿಸುತ್ತೇವೆ. ಎಲ್ಲರು ಒತ್ತಡದಲ್ಲೇ ಕರ್ತವ್ಯ ನಿಭಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ವೈದ್ಯರು ಹಾಗು ಆರೋಗ್ಯ ಸಿಬ್ಬಂದಿಗಳ ನೇಮಕಕ್ಕೆ ಜಿಲ್ಲಾಧಿಕಾರಿ, ಡಿಎಚ್‌ಒ, ಮೆಡಿಕಲ್ ಕಾಲೇಜಿನ ಡೀನ್ ಪೂರ್ಣ ಪ್ರಮಾಣದ ಅಧಿಕಾರ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಹ್ಮಣಿ, ಪಶ್ಚಿಮಘಟ್ಟ ರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಪೊಲೀಸ್ ವರೀಷ್ಠಾಧಿಕಾರಿ ಕ್ಷಮಾಮಿಶ್ರ, ತಹಸೀಲ್ದಾರ್ ಗೋವಿಂದರಾಜ್, ಟಿ.ಎಚ್.ಒ. ಶ್ರೀನಿವಾಸ್ ಇದ್ದರು.

error: Content is protected !!