ಕೊಡಗಿನ 5 ತಾಲ್ಲೂಕುಗಳಲ್ಲಿ ತಲಾ 100 ಆಮ್ಲಜನಕ ಹಾಸಿಗೆ ವ್ಯವಸ್ಥೆ

May 6, 2021

ಮಡಿಕೇರಿ ಮೇ 6 : ಕೊಡಗು ಜಿಲ್ಲೆಯಲ್ಲಿ ಈಗಾಗಲೇ 13 ಸಾವಿರ ಲೀಟರ್ ಆಮ್ಲಜನಕ ಟ್ಯಾಂಕನ್ನು ಒದಗಿಸಲಾಗಿದೆ. ಪ್ರತಿನಿತ್ಯ ಬೇಕಾದ ಆಮ್ಲಜನಕ ಮಾಹಿತಿ ಅಧಿಕಾರಿಗಳಿಗೆ ಇರಬೇಕು. ಯಾವುದೇ ಕಾರಣಕ್ಕೂ ಆಮ್ಲಜನಕ ಕೊರತೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಪ್ರತಿನಿತ್ಯ ಪರಿಶೀಲನೆ ನಡೆಸಬೇಕು ಎಂದು ಸಂಸದ ಪ್ರತಾಪ್ ಸಿಂಹ ನಿರ್ದೇಶನ ನೀಡಿದರು.
ಮುಂಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ತಲುಪುವ ಸಂಭವವಿದ್ದು, ಜಿಲ್ಲೆಯಲ್ಲಿನ 5 ತಾಲ್ಲೂಕುಗಳಲ್ಲಿ ತಲಾ 100 ಆಮ್ಲಜನಕ ಹಾಸಿಗೆ ವ್ಯವಸ್ಥೆ ಮಾಡಲು ಬೇಕಾದ ಅಗತ್ಯ ಸಿಲೆಂಡರ್‌ಗಳನ್ನು ದಾಸ್ತಾನು ಮಡಲು ಕ್ರಮವಹಿಸಬೇಕು ಎಂದು ಸಂಸದರು ಹೇಳಿದರು.

error: Content is protected !!