ಸೋಮವಾರಪೇಟೆ : ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾಹನಗಳಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

07/05/2021

ಸೋಮವಾರಪೇಟೆ ಮೇ 7 : ಸೋಮವಾರಪೇಟೆ ತಾಲ್ಲೂಕಿನ ಕೋವಿಡ್-19 ಸೋಂಕಿತರ ಸೌಲಭ್ಯಕ್ಕಾಗಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎರಡು ವಾಹನಗಳನ್ನು ನೀಡಲಾಗಿದ್ದು, ವಾಹನಗಳ ಚಾಲಕರಿಗೆ ಪಿಪಿಇ ಕಿಟ್‌ನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ರವೀಂದ್ರ ಶುಕ್ರವಾರ ವಿತರಿಸಿದರು.
ತಾಲ್ಲೂಕಿನ ಕೋವಿಡ್ ಸೋಂಕಿತರು ಈ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಂತಿ ಹೇಳಿದರು. ಮೊ.ಸಂ 9449387177, 9844971439, 9482587027, 7899257118 ಸಂಪರ್ಕಿಸಿ ವಾಹನದ ಉಚಿತ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ವೈದ್ಯರಾದ ಸತೀಶ್ ಕುಮಾರ್, ಮೇಲ್ವಿಚಾರಕರಾದ ಜಯಶ್ರೀ, ಎಂ.ಎಸ್.ಪದ್ಮಾ ಇದ್ದರು.