ಸೋಮವಾರಪೇಟೆ : ಕರ್ತವ್ಯ ನಿರತರಿಗೆ ಊಟ, ಉಪಹಾರ ವಿತರಣೆ

May 11, 2021

ಸೋಮವಾರಪೇಟೆ ಮೇ 11 : ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನವಜೀವನ ಸಮಿತಿಯ ಸದಸ್ಯ ಅಬ್ಬೂರುಕಟ್ಟೆ ನಿವಾಸಿ ರವಿಕುಮಾರ್ ಅವರು ಸೋಮವಾರಪೇಟೆ, ಬಾಣಾವರ, ಅಬ್ಬೂರುಕಟ್ಟೆ ಉತ್ತಮುತ್ತಲ ತಪಾಸಣಾ ಗೇಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಹಾಗು ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟವನ್ನು ಮಂಗಳವಾರ ವಿತರಿಸಿದರು. ರಸ್ತೆ ಬದಿಯ ನಿರ್ಗತಿಕರಿಗೂ ಊಟ ಕೊಟ್ಟರು. ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ, ಸದಸ್ಯರಾದ ವಿನಯ್, ಸಂಭ್ರಮ್, ಅಜಿತ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ, ಜಾನಪದ ಪರಿಷತ್ ತಾಲೂಕು ಕಾರ್ಯದರ್ಶಿ ರುಬಿನಾ ಸಹಕಾರ ನೀಡಿದರು.

error: Content is protected !!