ಸ್ಕ್ಯಾನಿಂಗ್ ಕೇಂದ್ರ ಗಳಿಗೆ ಅಧಿಕಾರಿಗಳ‌ ದಿಢೀರ್ ಭೇಟಿ : ಹೆಚ್ಚು ಹಣ ಪಡೆದಿರುವುದು ಪತ್ತೆ

May 11, 2021

ಹಾಸನ ಮೇ 11 : ಜಿಲ್ಲೆಯ ಖಾಸಗಿ‌ ನರ್ಸಿಂಗ್ ಹೋಂ ಹಾಗೂ ಲ್ಯಾಬ್ ಗಲ್ಲಿ ಗಳಲ್ಲಿ ಕೋವಿಡ್ 19 ಸಂಬಂಧಿತ ಸಿ.ಟಿ ಸ್ಕ್ಯಾನಿಂಗ್ ಗೆ ಅಧಿಕ ದರ ವಿಧಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಅರ್ ಗಿರೀಶ್ ಅವರ ಸೂಚನೆಯ ಮೇರೆಗೆ  ಹಾಸನ ತಹಶಿಲ್ದಾರ್ ಶಿವಶಂಕರಪ್ಪ,ತಾಲ್ಲೂಕು ವೈದ್ಯಾಧಿಕಾರಿ ಡಾ ವಿಜಯ್ ಹಾಗೂ ಬಡಾವಣೆ ಠಾಣೆಯ ಪಿ.ಎಸ್ ಐ ಆಶ್ವಿನಿ ನಾಯಕ್ ಅವರು ಇಂದು ನಗರದ ಎಲ್ಲಾ ಖಾಸಗಿ ಅಸ್ಪತ್ರೆ ಹಾಗೂ ಲ್ಯಾಬ್ ಗಳಿಗೆ  ದಿಢೀರ್‌ ಭೇಟಿ ನೀಡಿ ಪರಶೀಲನೆ‌ ನಡೆಸಿದರು .ಸರ್ಕಾರ ಸಿ.ಟಿ ಸ್ಕ್ಯಾನಿಂಗ್ ಗೆ  ಬಿ.ಪಿ.ಎಲ್‌ ಕಾರ್ಡ್ ದಾರರಿಗೆ 1500 ರೂ ಹಾಗೂ ಎ.ಪಿ.ಎಲ್‌ ಕಾರ್ಡ್ ದಾರರಿಗೆ  2500ರೂ ನಿಗದಿ ಪಡಿಸಿದ್ದು‌ ಕೆಲವೆಡೆ ಅದಕ್ಕಿಂತ ಹೆಚ್ಚು ಹಣ ಪಡೆದಿರುವುದು ಪತ್ತೆಯಾಗಿದೆ . ಈ ಬಗ್ಗೆ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿಗೆ ವರದಿ ನೀಡಲಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ವಿಜಯ್ ಬಿ ಎಂ ಅವರು ತಿಳಿಸಿದ್ದಾರೆ.ಇದೇ ರೀತಿ ಕೋವಿದ್ ಚಿಕಿತ್ಸೆ ಗೆ ಸರ್ಕಾರ ನಿಗಧಿಪಡಿಸಿರುವ ದರಕ್ಕಿಂತ ಅಧಿಕ ಹಣ ಪಡೆದಲ್ಲಿ ಜಿಲ್ಲಾಡಳಿತ ರಚಿಸಿರುವ ಆಡಿಟ್ ತಂಡ ಪರಿಶೀಲನೆ ನಡೆಸಿ ವರದಿ ನೀಡಲಿದ್ದು ಈ ಬಗ್ಗೆ ಗಮನ ಹರಿಸಿ ನಿಯಮಿತವಾಗಿಯೇ ಬಿಲ್ ಪಡೆಯುವಂತೆಯೂ‌ಈ ಅಧಿಕಾರಿಗಳ ತಂಡ ಆಸ್ಪತ್ರೆ ‌ಮುಖ್ಯಸ್ಥರಿಗೆ ಸೂಚನೆ ನೀಡಿದೆ.

error: Content is protected !!