ತಾಹಿರ ಅಫೀಜ್ ನಿಧನಕ್ಕೆ ಕೊಡಗು ಜಿಲ್ಲಾ ಲೇಖಕರ ಬಳಗ ಸಂತಾಪ

May 11, 2021

ಮಡಿಕೇರಿ ಮೇ 11 : ಮಡಿಕೇರಿ ನಗರಸಭಾ ಮಾಜಿ ಸದಸ್ಯೆ ತಾಹಿರ ಅಫೀಜ್ ನಿಧನಕ್ಕೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಸಂತಾಪ ಸೂಚಿಸಿದೆ.಻ನಿನ್ನೆ ನಿಧನರಾದ ತಾಹಿರ ಅಫೀಜ್ ಬಳಗದ ಸದಸ್ಯರಾಗಿದ್ದುದಲ್ಲದೆ, ಕೊಡಗಿನ ಸಾಂಸ್ಕೃತಿಕ ಚಟುವಟಿಕೆ, ರಾಜಕೀಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಮಡಿಕೇರಿ ದಸರಾ ಸಮಿತಿಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಇವರ ಅಗಲಿಕೆ ಅತೀವ ದು:ಖ ತಂದಿದೆ ಎಂದು ಬಳಗದ ಅಧ್ಯಕ್ಷ ಕೇಶವ ಕಾಮತ್, ಗೌರವ ಸಲಹೆಗಾರ ಟಿ.ಪಿ.ರಮೇಶ್‌, ಉಪಾಧ್ಯಕ್ಷ ಬೇಬಿ ಮ್ಯಾಥ್ಯೂ , ಮೊಹಿದಿನ್, ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್, ಪ್ರಧಾನ ಕಾರ್ಯದರ್ಶಿ-ವಿಲ್ಫ್ರೆಡ್ ಕ್ರಾಸ್ತ ತಿಳಿಸಿದ್ದಾರೆ.

error: Content is protected !!