ಕೊಡಗು : ಮೃತರ ಸಂಖ್ಯೆ ಇಳಿಮುಖ

May 12, 2021

ಮಡಿಕೇರಿ ಮೇ 12 : ಇದು ಕೊಡಗು ಜಿಲ್ಲೆಯ ಮಟ್ಟಿಗೆ ಕೊಂಚ ತೃಪ್ತಿಯ ನೀಡುವ ಸುದ್ದಿ. ಕೋವಿಡ್ ಸೋಂಕಿತರಲ್ಲಿ ಮಾತ್ರವಲ್ಲದೆ ಮೃತರ ಸಂಖ್ಯೆಯಲ್ಲೂ ದಾಖಲೆ ಬರೆದಿದ್ದ ಜಿಲ್ಲೆ ಇದೀಗ ಸಾವಿನ ಪ್ರಕರಣವನ್ನು ಇಳಿಸಿಕೊಂಡಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ (ಇಂದು ಬೆಳಗ್ಗೆ 8 ಗಂಟೆಯವರೆಗೆ) 1 ಸಾವು ಉಂಟಾಗಿದ್ದು, ಇಲ್ಲಿಯವರೆಗೆ ಒಟ್ಟು 190 ಮರಣ ಪ್ರಕರಣಗಳು ವರದಿಯಾಗಿದೆ. ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 488 ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.
ಜನರು ಮತ್ತಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ಆರೋಗ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

error: Content is protected !!