*ನನ್ನ ಈದ್ ನನ್ನ ಮನೆಯಲ್ಲಿ.* *ಓಡಾಡಿಕೊಂಡು ಕೊರೋನ ರೋಗ ಹರಡಲು ಕಾರಣನಾಗಲಾರೆ.*

12/05/2021

*ನನ್ನ ಈದ್ ನನ್ನ ಮನೆಯಲ್ಲಿ.*
*ಓಡಾಡಿಕೊಂಡು ಕೊರೋನ ರೋಗ ಹರಡಲು ಕಾರಣನಾಗಲಾರೆ.*
       *ಹೌದು…*   _ರಂಝಾನ್ ಮುಗಿಯುತ್ತಾ ಬಂತು.ನಾಳೆ  ಈದ್ ಹಬ್ಬ.ನನ್ನ ಈದ್ ಹಬ್ಬವನ್ನು ನನ್ನ ಮನೆಯವರ ಜೊತೆಗೆ ಮಾತ್ರ ನಾನು ಆಚರಿಸುವೆನೆಂದು ತೀರ್ಮಾನಿಸಿದ್ದೇನೆ._
   _ಪ್ರಸಕ್ತ ಇಂದಿನ ದಿನಗಳಲ್ಲಿ ಕೊರೋನ ಸಾಂಕ್ರಾಮಿಕ ರೋಗವು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು,ಹಲವಾರು ಕಷ್ಟ-ನಷ್ಟಗಳನ್ನು ಉಂಟು ಮಾಡಿದ್ದು,ಹಲವಾರು ಜನರ ಸಾವಿಗೆ ಕಾರಣವಾಗಿದ್ದು ನಮಗೆಲ್ಲರಿಗೂ ತಿಳಿದಿರುವಂತದ್ದೇ.ಈ ರೋಗವನ್ನು ನಿಯಂತ್ರಿಸಲು ರಾಜ್ಯ ಸರಕಾರವು ಸುಮಾರು 14 ದಿನಗಳವರೆಗೆ  *ಲಾಕ್’ಡೌನ್* ಹೇರಿದ್ದು, ಅದರಂತೆ ನಾವೆಲ್ಲರೂ  ನಮ್ಮ ನಮ್ಮ ಮನೆಯಲ್ಲೇ ಇದ್ದು, ನಮ್ಮ ರಕ್ಷಣೆ, ನಮ್ಮ ಕುಟುಂಬ, ನೆರೆಕರೆಯವರ ರಕ್ಷಣೆಗಳನ್ನು ಮಾಡುತ್ತಿರುವುದು ನಮ್ಮ ಸಾಧನೆಯಲ್ಲವೇ? ಅಲ್ಲದೇ ನಾವೇ ಮಾಡುತ್ತಿರುವ ರಕ್ಷಣಾ ಕಾರ್ಯವಾಗಿದೆ._
  *ಇಷ್ಟು ದಿನದ ನಮ್ಮ ಮಹತ್ತರ ಸಾಧನೆಯನ್ನು,ನಾವು ಮಾಡಿದ ರಕ್ಷಣಾ ಕವಚವನ್ನು ನಾಳಿನ ಒಂದು ದಿನದ ಹಬ್ಬದ ದಿವಸ ಎಲ್ಲರೂ ಗುಂಪುಗೂಡಿ,ಎಲ್ಲೆಂದರಲ್ಲಿ ಓಡಾಡಿ, ರೋಗ ಹರಡಲು ನಾವು ಕಾರಣರಾದರೆ…!*
    *_ಊಹಿಸಬಹುದೇ ಒಂದು ದಿನದ ಎಫೆಕ್ಟ್.._*ನಮ್ಮ ನಮ್ಮ ಖಾಝಿಯವರು ಸರಳತೆಯ ಈದ್,ಮನೆಯಲ್ಲಿಯೇ ಈದ್ ನಿರ್ವಹಿಸಿ ಎಂದು ಕರೆಕೊಡುತ್ತಿರುವುದು ಅವರ ಸ್ವಾರ್ಥ ಸಾಧನೆಗೆಂದು ಭಾವಿಸಬೇಡಿ.ಪ್ರತಿಯೊಂದು ಮೊಹಲ್ಲಾಗಳು,ಸಂಘ ಸಂಸ್ಥೆಗಳು ಮತ್ತು ಪ್ರತಿಯೊಬ್ಬರೂ *ಕೊರೋನ ರೋಗ ನಿರ್ಮೂಲನೆಯ ಲಾಕ್’ಡೌನ್* ಭೇಧಿಸದಂತೆ *ನನ್ನ ಮನೆಯಲ್ಲಿ ನನ್ನ ಈದ್…ಓಡಾಡಿಕೊಂಡು ರೋಗ ಹರಡಲು ಕಾರಣನಾಗಲಾರೆ*..ಎಂಬ ಪ್ರತಿಜ್ಞೆ ಮಾಡೋಣವಲ್ಲವೇ?
*ಮಾಸ್ಕ್ ಧರಿಸಿರಿ, ಸಾಮಾಜಿಕ ಅಂತರ ಕಾಪಾಡಿ. ರೋಗ ಮುಕ್ತ ನಾಡಿಗಾಗಿ ನಮ್ಮ ನಡೆ..*
(((*ಮೈಸಿ ಕತ್ತಣಿರ **ಯುವಕಾಂಗ್ರೆಸ್ ಉಪಾಧ್ಯಕ್ಷರು ಕೊಡಗು ಜಿಲ್ಲೆ *)))