ಮನೆಯಲ್ಲೇ ಕೋವಿಡ್ ಪರೀಕ್ಷೆ

ಮಡಿಕೇರಿ ಮೇ 13 : ಕೋವಿಡ್-19 ಸಂಬಂಧಿಸಿದಂತೆ ವಿರಾಜಪೇಟೆ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ವಾಸವಿರುವ ಸಾರ್ವಜನಿಕರು ತಮ್ಮ ಆರೋಗ್ಯದಲ್ಲಿ ಕೋವಿಡ್ ಗುಣಲಕ್ಷಣಗಳು ಕಂಡು ಬಂದ್ದಲ್ಲಿ ತಮ್ಮ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು/ ಗ್ರಾಮ ಲೆಕ್ಕಾಧಿಕಾರಿಗಳು/ ಶಿಕ್ಷಕರು/ ಗ್ರಾಮ ಸಹಾಯಕರು/ ಆಶಾ ಕಾರ್ಯಕರ್ತೆಯರು ಇವರುಗಳನ್ನು ಸಂಪರ್ಕಿಸಿದ್ದಲ್ಲಿ ಸಂಬAಧಪಟ್ಟ ಅಧಿಕಾರಿಗಳು ತಮ್ಮ ಮನೆಗಳಿಂದಲೇ ಕೋವಿಡ್ ಪರೀಕ್ಷೆಗೆ ಕ್ರಮವಹಿಸಿ, ವರದಿ ತಿಳಿಸಲಾಗುವುದು ಎಂದು ತಹಶೀಲ್ದಾರ್ ಯೋಗಾನಂದ ಅವರು ಹೇಳಿದ್ದಾರೆ.
ಹೋಮ್ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳಿಗೆ ಊಟೋಪಚಾರ ಮತ್ತು ಔಷಧಿಗಳ ಸಮಸ್ಯೆ ಎದುರಾದಲ್ಲಿ ತಮ್ಮ ಗ್ರಾಮದ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು/ ಗ್ರಾಮ ಲೆಕ್ಕಾಧಿಕಾರಿಗಳು/ ಶಿಕ್ಷಕರು/ ಗ್ರಾಮ ಸಹಾಯಕರು/ ಆಶಾಕಾರ್ಯಕರ್ತೆಯರು, ಇವರುಗಳನ್ನು ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕೋವಿಡ್ ಪರೀಕ್ಷೆಗೆ ಒಳಪಟ್ಟ ಸಾರ್ವಜನಿಕರು ವರದಿ ಬರುವವರೆಗೂ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ಭಾದಿತ ಪ್ರತಿಯೊಬ್ಬ ವ್ಯಕ್ತಿಯೂ ಸ್ಕಿçÃನಿಂಗ್ ಪರೀಕ್ಷೆಗೆ ಒಳಪಡಬೇಕು. ಕೋವಿಡ್ ಪಾಸಿಟಿವ್ ವ್ಯಕ್ತಿಗಳು ಹೋಮ್ ಐಸೋಲೇಷನ್‌ನಲ್ಲಿರಲು ತೋಂದರೆಯಾದಲ್ಲಿ (ಊಟೋಪಚಾರ ಮತ್ತು ಔಷಧಿಗಳ ಸಮಸ್ಯೆ) ತಮ್ಮ ಗ್ರಾಮದ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು/ ಗ್ರಾಮ ಲೆಕ್ಕಾಧಿಕಾರಿಗಳು/ ಶಿಕ್ಷಕರು/ ಗ್ರಾಮ ಸಹಾಯಕರು/ ಆಶಾ ಕಾರ್ಯಕರ್ತೆಯರು, ಇವರುಗಳನ್ನು ಸಂಪರ್ಕಿಸಿದ್ದಲ್ಲಿ ಸಂಬAಧಪಟ್ಟ ಅಧಿಕಾರಿಗಳು ತಮ್ಮನ್ನು ಕೋವಿಡ್ ಕೇರ್ ಸೆಂಟರ್‌ಗೆ ನೇರವಾಗಿ ದಾಖಲಿಸಲು ಕ್ರಮವಹಿಸುತ್ತಾರೆ. ಕೋವಿಡ್ ಸಹಾಯವಾಣಿ ಸಂಖ್ಯೆ 08274- 256328 ಸಂಪರ್ಕಿಸಬಹುದಾಗಿದೆ ಎಂದು ವಿರಾಜಪೇಟೆ ತಹಶೀಲ್ದಾರ ಯೋಗಾನಂದ ಅವರು ತಿಳಿಸಿದ್ದಾರೆ. ಕೋವಿಡ್ ಸಹಾಯವಾಣಿ ಸಂಖ್ಯೆ 08274-256328 ಸಂಪರ್ಕಿಸಬಹುದಾಗಿದೆ.