ಸ್ವತ: ರಸ್ತೆ ಗುಂಡಿ ಮುಚ್ಚಿದ ಗ್ರಾ.ಪಂ ಸದಸ್ಯ

14/05/2021

ಮಡಿಕೇರಿ ಮೇ 14 : ತಮ್ಮ ವಾರ್ಡ್ ನಲ್ಲಿ ಮಳೆ ನೀರಿನಿಂದ ಗುಂಡಿಬಿದ್ದ ರಸ್ತೆಯಲ್ಲಿ ನಾಲ್ಕೈದು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದನ್ನು ಗಮನಿಸಿದ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ದೀನ್ ಅವರು ಸ್ವತಃ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಿದರು.

ರಸ್ತೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ತಾವೇ ಗುದ್ದಲಿ ಹಿಡಿದು ರಸ್ತೆ ಗುಂಡಿ ಮುಚ್ಚಲು ಮುಂದಾದರು. ಸ್ಥಳೀಯ ವಾರ್ಡ್ ಸದಸ್ಯರೇ ಸ್ವತಃ ಗುದ್ದಲಿ ಹಿಡಿದು ಕೆಲಸ ಮಾಡುತ್ತಿರುವುದನ್ನು ಕಂಡು ಸ್ಥಳೀಯ ಯುವಕರು ಶಂಶುದ್ಧೀನ್ ಅವರಿಗೆ ಸಾಥ್ ನೀಡಿದರು. ಗ್ರಾ.ಪಂ ಸದಸ್ಯನ ಜನಪರ ಕಾಳಜಿ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.