ಸೋಮವಾರಪೇಟೆ ಬಿಜೆಪಿಯಿಂದ ಹೊರ ರೋಗಿಗಳಿಗೆ ಊಟದ ವ್ಯವಸ್ಥೆ

14/05/2021

ಸೋಮವಾರಪೇಟೆ ಮೇ 14 : ಸೋಮವಾರಪೇಟೆ ಪಟ್ಟಣದ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಮಂಡಲ ಬಿ.ಜಿ.ಪಿ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
ಜಿಲ್ಲಾ ಬಿ.ಜೆ.ಪಿ. ಕಾರ್ಮಿಕ ಪ್ರಕೋಷ್ಟದ ಜಿಲ್ಲಾಧ್ಯಕ್ಷ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಅವರ ನೆರವಿನಿಂದ ಆಸ್ಪತ್ರೆಗೆ ಆಗಮಿಸುವ ಹೊರರೋಗಿಗಳು ಹಾಗೂ ಅವರ ಸಹಾಯಕರುಗಳಿಗೆ ಪ್ರತಿದಿನ ಮಧ್ಯಾಹ್ನದ  ಊಟ ವಿತರಿಸಲಾಗುತ್ತಿದ್ದು, ಗ್ರಾಮೀಣ ಭಾಗಗಳಿಂದ ಬರುವ ಜನರಿಗೆ ಅನುಕೂಲ ವಾದಂತಾಗಿದೆ.
ಈ ಸಂದರ್ಭ ಮಂಡಲ ಬಿ.ಜೆ.ಪಿ.ಅಧ್ಯಕ್ಷ ಮನುಕುಮಾರ್ ರೈ,ಪ್ರಮುಕರುಗಳಾದ  ಧನು, ಪ್ರಿಜೇಶ್ ಹಾಗೂ ಮುಂತಾದವರು ಹಾಜರಿದ್ದರು.