ಸೋಮವಾರಪೇಟೆ : ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ

14/05/2021

ಸೋಮವಾರಪೇಟೆ ಮೇ 14 : ಸೋಮವಾರಪೇಟೆ ಪಟ್ಟಣದ ಪೌರಕಾರ್ಮಿಕರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ದಿನಸಿ ಸಾಮಾಗ್ರಿ ವಿತರಿಸಿದರು.  ಪಟ್ಟಣ ಪಂಚಾಯ್ತಿ ಆವರಣದಲ್ಲಿ ಎಲ್ಲಾ ಪೌರ ಕಾರ್ಮಿರಿಗೆ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ತಪಾಸಣೆ ನಡೆಸಲಾಯಿತು. ನಂತರ 40 ಕಾರ್ಮಿಕ  ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಿಸಿದರು. ಪಟ್ಟಣದ ಶುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯವಾದದ್ದು ಆದರೆ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜೀವಹಿಸಬೇಕೆಂದ ಅವರು ಪ್ರತಿಯೊಬ್ಬರೂ ಎರೆಡೆರೆಡು ಮಾಸ್ಕ್ ದರಿಸಬೇಕೆಂದರು. ಈ ಸಂದರ್ಭ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನಳಿನಿಗಣೇಶ್, ಉಪಾಧ್ಯಕ್ಷ ಸಂಜೀವ,ಸದಸ್ಯರುಗಳು, ಮುಖ್ಯಾಧಿಕಾರಿ ನಾಚಪ್ಪ,ಆರೋಗ್ಯ ನಿರೀಕ್ಷಕ ಉದಯಕುಮಾರ್ ಹಾಗೂ ಮುಂತಾದವರು ಹಾಜರಿದ್ದರು.