ಎಚ್ಚರಿಕೆ ! ಮುಂದಿನ 24 ಗಂಟೆ ಭಾರೀ ಗಾಳಿ ಮಳೆ

May 14, 2021

ಮಡಿಕೇರಿ ಮೇ 14 : ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಗೆ ಸಲಹೆ ನೀಡಲಾಗಿದೆ.

ನದಿ ತೀರ, ಬೆಟ್ಟ ಗುಡ್ಡ ಮತ್ತು ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಕೊಡಗು ಜಿಲ್ಲಾಡಳಿತ ಈಗಾಗಲೇ ಮನವಿ ಮಾಡಿದೆ.

error: Content is protected !!