ಚಂಡಮಾರುತ : 9 ಮೀನುಗಾರರು ನಾಪತ್ತೆ

16/05/2021

ಮಡಿಕೇರಿ ಮೇ 16 : ಚಂಡಮಾರುತದ ಗಾಳಿಯ ರಭಸಕ್ಕೆ ದೋಣಿ ಮಗುಚಿ ಬಿದ್ದು 9 ಮೀನುಗಾರರು ಸಮುದ್ರದಲ್ಲಿ ನಾಪತ್ತೆಯಾಗಿರುವ ಘಟನೆ ನಾಗಪಟ್ಟಿಣಂ ಜಿಲ್ಲೆಯಲ್ಲಿ ನಡೆದಿದೆ.
ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆ ದೋಣಿಗಳಲ್ಲಿ ತೆರಳಿ ವಾಪಸ್ ಬರುವ ಸಂದರ್ಭ ದುರ್ಘಟನೆ ನಡೆದಿದ್ದು, ಮೀನುಗಾರರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.