ಗೋಹತ್ಯೆ : ನಾಲ್ವರ ಬಂಧನ

May 16, 2021

*ಸಿದ್ದಾಪುರ ಮೇ 16 : (ಅಂಚೆಮನೆ ಸುಧಿ) ಇತ್ತೀಚೆಗೆ ಸಿದ್ದಾಪುರ ಸಮೀಪ ಮಠ ಗ್ರಾಮದಲ್ಲಿ ನಡೆದಿದ್ದ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾಲ್ದಾರೆ ನಿವಾಸಿಗಳಾದ ಹಂಸ, ಶಕೀರ್, ಬಾಡಗ ಬಾಣಂಗಾಲ ನಿವಾಸಿಗಳಾದ ನಾಸೀರ್ ಹಾಗೂ ಆಶೀಶ್ ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿದ ಆಯುಧಗಳು, ಪಿಕ್ ಅಪ್ ಜೀಪ್, ದ್ವಿಚಕ್ರ ವಾಹನ ಹಾಗೂ ತಕ್ಕಡಿಯನ್ನು ವಶಕ್ಕೆ ಪಡೆಯಲಾಗಿದೆ.
ಮಠ ಗ್ರಾಮದ ಕೃಷಿಕ ಕ್ಸೇವಿಯರ್ ಅವರಿಗೆ ಸೇರಿದ ಗುಜರಾತ್ ಗೀರ್ ತಳಿಯ ಹಸುವನ್ನು ಕೊಟ್ಟಿಗೆಯಿಂದ ಕದ್ದೊಯ್ದು ಹತ್ಯೆ ಮಾಡಿ ಮಾಂಸ ಮಾಡಲಾಗಿತ್ತು. ಈ ಬಗ್ಗೆ ಕ್ಸೇವಿಯರ್ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಎಎಸ್‌ಐ ತಮ್ಮಯ್ಯ, ಮಲ್ಲಪ್ಪ, ಶಿವಕುಮಾರ್, ವಸಂತ, ಲವಕುಮಾರ್, ಬೆಳ್ಳಿಯಪ್ಪ, ರಮೇಶ್, ಚಾಲಕ ಗೋವರ್ಧನ್ ಪಾಲ್ಗೊಂಡಿದ್ದರು.

error: Content is protected !!